ಕವಿತೆ: ಮುಗಿಲು ಮುಟ್ಟಿದ ಕೂಗು

– .

ಮಸಣದಲಿ ಆತ್ಮಗಳು ನಲಿಯುತ್ತಿವೆ ನೋಡು
ಉಸಿರು ನಿಂತರು ಉರಿಯುತ್ತಿವೆ ನೋಡು

ಗಳಿಸಿದ ಆಸ್ತಿಯು ಆರಡಿ ಮೂರಡಿ ಜಾಗವೊಂದೆ
ಪ್ರೀತಿಯ ಹನಿಗಳಿಂದು ಸುರಿಯುತ್ತಿವೆ ನೋಡು

ಒಂಟಿಯಾಗಿ ಜಗದಿ ಬದುಕು ಕಟ್ಟಿಕೊಂಡೆಯಲ್ಲ
ಒಳಿತು ಕೆಡಕುಗಳು ಬೆರೆಯುತ್ತಿವೆ ನೋಡು

ಬೆವರು ಹನಿಗೆ ಪುಡಿಗಾಸಿನ ಕಿಮ್ಮತ್ತಿಲ್ಲವೆ
ಚಿಲ್ಲರೆ ಕೈಗಳಿಂದು ಕುಣಿಯುತ್ತಿವೆ ನೋಡು

ನೆಮ್ಮದಿಯಿಲ್ಲದ ಜೀವನಕೆ ನೆಲೆಯಿಲ್ಲ ಮಿತ್ರ
ಕಲ್ಲುಮುಳ್ಳಿನ ಮಾರ‍್ಗ ಸುಳಿಯುತ್ತಿವೆ ನೋಡು

ಕಿಚ್ಚಿನಲಿ ಬೇಯುವಾಗ ಮುಗಿಲು ಮುಟ್ಟಿದ ಕೂಗು
ಕೊನೆಗೆ ನೋವುಗಳು ಮುಳುಗುತ್ತಿವೆ ನೋಡು

ಹರಿದ ಚಿಂದಿಯ ಬದುಕು ಈ ಸಂಸಾರ
ಅಬಿನವನ ಪದಗಳು ಶಪಿಸುತ್ತಿವೆ ನೋಡು

(ಚಿತ್ರ ಸೆಲೆ: theunboundedspirit.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಸೊಗಸಾಗಿದೆ

ಅನಿಸಿಕೆ ಬರೆಯಿರಿ: