ದಿಡೀರ್ ಹೆಸರುಬೇಳೆ ಮಸಾಲೆ ದೋಸೆ
– ಕಲ್ಪನಾ ಹೆಗಡೆ.
ಬೇಕಾಗುವ ಸಾಮಾನುಗಳು
- ಸಕ್ಕರೆ – ಅರ‍್ದ ಚಮಚ
- ಹೆಸರುಬೇಳೆ – 1 ಪಾವು
- ಉಪ್ಪು – ರುಚಿಗೆ ತಕ್ಕಶ್ಟು
- ಅಕ್ಕಿ ಹಿಟ್ಟು – ಅರ‍್ದ ಕಪ್ಪು
- ಎಣ್ಣೆ/ತುಪ್ಪ – ಕಾಲು ಚಮಚ
ಮಾಡುವ ಬಗೆ
ಹೆಸರುಬೇಳೆಯನ್ನು 2 ಗಂಟೆಗಳ ಕಾಲ ನೆನಸಿ, ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಅದಕ್ಕೆ ಅರ‍್ದ ಕಪ್ಪು ಅಕ್ಕಿ ಹಿಟ್ಟು, ಅರ‍್ದ ಚಮಚ ಸಕ್ಕರೆ, ರುಚಿಗೆ ತಕ್ಕಶ್ಟು ಉಪ್ಪು, ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
ದೋಸೆ ಕಾವಲಿ ಕಾದ ಬಳಿಕ, ದೋಸೆ ಹಿಟ್ಟು ಹಾಕಿ ಸೌಟಿನಿಂದ ತೆಳ್ಳಗೆ ಮಾಡಿ. ಮೇಲೆ ಕಾಲು ಚಮಚ ಎಣ್ಣೆ ಅತವಾ ತುಪ್ಪವನ್ನು ಹಾಕಿ ಬೇಯಿಸಿಕೊಳ್ಳಬೇಕು. ಬೇಕಾದಲ್ಲಿ ಸ್ವಲ್ಪ ಚಟ್ನಿಪುಡಿಯನ್ನು ಉದುರಿಸಿಕೊಳ್ಳಬಹುದು. ಸ್ವಲ್ಪ ಗರಿಗರಿಯಾದ ಮೇಲೆ ಆಲೂಗಡ್ಡೆ ಪಲ್ಯ ಅತವಾ ಈರುಳ್ಳಿ ಬಾಜೀ, ಚಟ್ನಿ ಜೊತೆಗೆ, ತಯಾರಿಸಿದ ಮಸಾಲೆ ದೋಸೆಯನ್ನು ಸವಿಯಲು ನೀಡಿ.
ಅಹಾ ನನ್ನಿಷ್ಟದ ಫಲಹಾರ. ???