ಕವಿತೆ: ದೊಂದಿ
ಕಗ್ಗಲ್ಲನ್ನೂ ಮ್ರುದುವಾಗಿ
ಕೊರೆದು ಬೇರೂರಿ ನಿಂತು
ತೀಡುವ ತಂಗಾಳಿಯ ಸೆಳೆತಕೆ
ಬಾಗಿ ಬಳುಕುವ
ಬಳ್ಳಿಯ ಕುಡಿಯಲ್ಲಿ
ನಿನ್ನ ನಡಿಗೆಯ ಸೆಳವು ಕಂಡು
ನನ್ನ ಕಣ್ಣುಗಳು ಮಿನುಗುತ್ತವೆ
ಬೆಳದಿಂಗಳಿಗೆ ಬೇಡವಾದ
ಕಾಡಿಗೆ ಕಪ್ಪಿನ ರಾತ್ರಿಯಲಿ
ದೂರದಿ ಮಿನುಗುವ
ಕೋಟಿ ನಕ್ಶತ್ರಗಳ ವದನದಲಿ
ನಿನ್ನ ನಗೆಯ ಬೆಳಕು ಚೆಲ್ಲಿದಂತಾಗಿ
ನನ್ನ ಮನಸ್ಸು ಮುದಗೊಳ್ಳುತ್ತದೆ
ಹೀಗೇ ನೀ ದಿಕ್ಕರಿಸಿ ಚೆಲ್ಲಿ ಹೋದ
ಸುಡುಸುಡುವ ನೆನಪಿನ ಕಿಡಿಗಳನು
ಹೆಕ್ಕಿ ದೊಂದಿ ಮಾಡಿಕೊಳ್ಳುತ್ತಿದ್ದೇನೆ
ಬದುಕಿನ ಕತ್ತಲೆಗಿರಲೆಂದು
(ಚಿತ್ರ ಸೆಲೆ: healingwithdrcraig.com )
ಇತ್ತೀಚಿನ ಅನಿಸಿಕೆಗಳು