ಕವಿತೆ: ಪಾಕ ಪ್ರಾವೀಣ್ಯ
ಪ್ರಿಯ ಗೆಳತಿ… ಹಾಗಲ್ಲ
ಹೇಳತೇನೆ ಕೇಳಾ
ನಗೆಯ ಮುಕವಾಡವನು
ದರಿಸಿರಬೇಕು
ಒತ್ತೊತ್ತಿ ಬರುವ ನೋವು
ವ್ಯಕ್ತಗೊಳ್ಳದ ಹಾಗೆ
ಅಕ್ಕರೆಯನು ಉಕ್ಕಿಸಿಕೊಳ್ಳಬೇಕು
ಅಡಗಿಸಿದ ದುಗುಡವು
ಮರೆತು ಹೋಗುವ ಹಾಗೆ
ಹದವರಿತು ಉರಿಸುತಲಿರಬೇಕು
ಬಾಳಿನೊಲೆಯನು
ಉಕ್ಕುಕ್ಕಿ ಬರುವ ಚಿಂತೆ ಸುರಿದು
ಆರಿ ಹೋಗದ ಹಾಗೆ
ನೂರು ನೋವನು ಅಡಗಿಸಿಡಬೇಕು
ಉಣಬಡಿಸಲು ಬಗೆ ಬಗೆಯ ಪಾಕವನು
ಬಾಳುಗೆಡದ ಹಾಗೆ
ಇದನರಿತು ಅನುಸರಿಸಿದರೆ
ನೀನಾಗ ಕರುಣಾಮಯಿ, ತ್ಯಾಗಮಯಿ!
ಹಕ್ಕುಗಳನು ಕೇಳಿದರೆ
ಬಾಳಲರಿಯದ ಅವಿವೇಕಿ!
( ಚಿತ್ರ ಸೆಲೆ : needpix.com )
ಇತ್ತೀಚಿನ ಅನಿಸಿಕೆಗಳು