ಹಲಸಿನ ಹಣ್ಣಿನ ಚಿಪ್ಸ್
– ಸವಿತಾ.
ಬೇಕಾಗುವ ಸಾಮಾನುಗಳು
- ಹಲಸಿನ ಹಣ್ಣು – 10 ತೊಳೆ
- ಉಪ್ಪು – 2 ಚಮಚ
- ಒಣ ಕಾರದ ಪುಡಿ – 1/2 ಚಮಚ
- ಗರಮ್ ಮಸಾಲೆ ಪುಡಿ – 1 ಚಮಚ
- ಕರಿಯಲು ಎಣ್ಣೆ
ಮಾಡುವ ಬಗೆ
ಹಲಸಿನ ಬೀಜ ತೆಗೆದು ತೊಳೆ ಬಿಡಿಸಿ. ನಂತರ ತೆಳ್ಳಗೆ ಎಳೆಯ ಹಾಗೆ ಕತ್ತರಿಸಿ ಉಪ್ಪು ನೀರಿನಲ್ಲಿ ತೊಳೆದು ಇಟ್ಟುಕೊಳ್ಳಿ. ಒಂದು ಬಿಳಿ ಬಟ್ಟೆ ಮೇಲೆ ಸುರುವಿ ಹರಡಿ ಅರ‍್ದ ಗಂಟೆ ಬಿಡಬೇಕು. ಮೇಲಿನ ನೀರು ಆರಿದ್ದರೆ ಕರಿಯಲು ತಯಾರಿಸಿಕೊಳ್ಳಿ.
ಎಣ್ಣೆ ಕಾಯಿಸಿ ಕತ್ತರಿಸಿದ ಹಲಸಿನ ಹಣ್ಣಿನ ಎಳೆ ಹಾಕಿ ಚೆನ್ನಾಗಿ ಕರಿಯಿರಿ. ಕರಿದ ಚಿಪ್ಸ್ ಮೇಲೆ ಕಾರದ ಪುಡಿ ಮತ್ತು ಗರಮ್ ಮಸಾಲೆ ಪುಡಿ ಹಾಕಿ ಮಿಶ್ರ ಮಾಡಿ ಆರಲು ಬಿಡಿ. ಆರಿದ ನಂತರ ಬಿಸಿ ಬಿಸಿ ಹಲಸಿನ ಹಣ್ಣಿನ ಚಿಪ್ಸ್ ಚಹಾ ಕಾಪಿ ಜೊತೆ ಸವಿಯಿರಿ. ಡಬ್ಬದಲ್ಲಿ ಹಾಕಿಟ್ಟರೆ ಒಂದು ತಿಂಗಳವರೆಗೂ ತಿನ್ನಬಹುದು.
ಇತ್ತೀಚಿನ ಅನಿಸಿಕೆಗಳು