ಕವಿತೆ: ಶ್ರಾವಣ ಸಡಗರ

– ಶ್ಯಾಮಲಶ್ರೀ.ಕೆ.ಎಸ್.

ಆಶಾಡದ ಅಬ್ಬರವು ಅಡಗಿ
ಶ್ರಾವಣವು ಶರವೇಗದಿ ಬಂದು
ಹಸಿರುಟ್ಟು ನಿಂತಳು ಬೂದೇವಿ
ಚಿಟಪಟ ಸೋನೆ ಮಳೆಯಲ್ಲಿ ಮಿಂದು

ಹಬ್ಬಗಳೆಲ್ಲವೂ ಸಾಲು ಸಾಲಾಗಿ
ಶುಬದಿನಗಳು ಒಟ್ಟಾಗಿ ಬಂದಿರೆ
ಸಂಬ್ರಮಕ್ಕೆ ಅಣಿಯಾಗಿ
ಬಕ್ತಸಮೂಹವು ಕಾದಿಹುದು

ಪರಶಿವನಿಗೆ ಶರಣಾಗಿ
ಮಂಗಳಗೌರಿಯ ನೆನೆದಿಹರು
ನಾಗರಪಂಚಮಿಯ ನಾಗಪ್ಪನಿಗೆ ಶಿರಬಾಗಿ
ಬಕ್ತಿ ಬಾವದಿ ಹಾಲನು ಎರೆದಿಹರು

ಹೂ ಮುಡಿಸಿ, ಆಬರಣದಿ ಸಿಂಗರಿಸಿ
ಬಗೆ ಬಗೆ ನೈವೇದ್ಯಗಳ ಅರ‍್ಪಿಸಿ
ವರಮಹಾಲಕುಮಿಯ ವ್ರತ ಮಾಡಿಹರು
ಮುತ್ತೈದೆಯರ ಸಂತೈಸಿಹರು

ಶನಿದೇವನ ಕ್ರುಪೆಗಾಗಿ
ಎಳ್ಳು ಬತ್ತಿಗಳ ಹೊತ್ತಿಸಿ ಪೂಜಿಪರು
ಕೊಳಲನೂದುವ ಕ್ರಿಶ್ಣನ ಜಪಿಸುತ
ಗೋಕುಲಾಶ್ಟಮಿಯ ಆಚರಿಸಿಹರು

ಕಹಿ ಮರೆತು ಸಿಹಿ ಸವಿಯುತ
ಶ್ರಾವಣ ಮಾಸವ ಸಂಬ್ರಮಿಸಿಹರು

( ಚಿತ್ರ ಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *