ಚುಟುಕು ಕವಿತೆಗಳು

– ಕಾಂತರಾಜು ಕನಕಪುರ.

ಚುಟುಕು ಕವಿತೆಗಳು, Short poems

ಬದುಕಿಗಾಗಿ ಕಂಡ ಕನಸುಗಳನು
ಉಡುಗೊರೆಯಾಗಿ ನೀಡಿರುವೆ
ಯಾರಿಗೋ ಮಾರದಿರು

***

ಪ್ರೀತಿಯ ಹಕ್ಕಿಗೆ ಬದುಕಿನ ಪಲುಕುಗಳನು
ಬಹಳ ನಲುಮೆಯಿಂದ ಕಲಿಸಿದೆ ಅದು
ಹಾಡುತ್ತಾ ಹಾರಿಹೋಯಿತು

***

ಚಿಟ್ಟೆಯಾಗಬೇಕೆಂಬ ನನ್ನ ಹಂಬಲ
ತೆವಳುವ ಕಂಬಳಿ ಹುಳುವಾಗಿಯೇ
ಕರಗಿಹೋಯ್ತು

***

ಸಾವಿಗೂ ಪ್ರೀತಿ ಎಂದರೆ ತುಂಬಾ ಇಶ್ಟ
ಅದಕ್ಕೇ ಅದು ದೇಹವನ್ನು ಮಾತ್ರ
ಕೊಂದುಹಾಕಿತು

***

ಒಡೆದುಹೋದ ಮನವನು ಸಂತೈಸಲು
ಬಂದವರೆಲ್ಲರೂ ಕೈಗಳಲಿ ಕಲ್ಲುಗಳನು
ಹಿಡಿದು ತಂದರು

(ಚಿತ್ರ ಸೆಲೆ: pngtree.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.