ಎಲೆಕೋಸು-ಗಜ್ಜರಿ ಮಂಚೂರಿಯನ್

– ಸವಿತಾ.

ಬೇಕಾಗುವ ಸಾಮಾನುಗಳು

  • ಮೈದಾ ಹಿಟ್ಟು – 2 ಚಮಚ
  • ಗಜ್ಜರಿ ತುರಿ –1/4 ಬಟ್ಟಲು
  • ಎಲೆಕೋಸಿನ ತುರಿ – 1 ಬಟ್ಟಲು
  • ಗರಂ ಮಸಾಲೆ ಪುಡಿ – 1/2 ಚಮಚ
  • ಮೆಕ್ಕೆ ಜೋಳದ ಹಿಟ್ಟು – 2 ಚಮಚ
  • ಕತ್ತರಿಸಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಒಣ ಮೆಣಸಿನಕಾಯಿ ಪುಡಿ – 1 ಚಮಚ
  • ಕರಿಯಲು ಎಣ್ಣೆ
  • ಉಪ್ಪು – ರುಚಿಗೆ ತಕ್ಕಶ್ಟು

ಮಂಚೂರಿಯನ್ ಗ್ರೇವಿ ಮಾಡಲು

  • ಈರುಳ್ಳಿ – 1
  • ಟೊಮೋಟೊ – 3
  • ಎಣ್ಣೆ – 3 ಚಮಚ
  • ಸಕ್ಕರೆ – 1 ಚಮಚ
  • ಬೆಳ್ಳುಳ್ಳಿ – 10 ಎಸಳು
  • ಹಸಿ ಮೆಣಸಿನಕಾಯಿ – 1
  • ಹಸಿ ಶುಂಟಿ – 1/4 ಇಂಚು
  • ಗರಮ್ ಮಸಾಲೆ ಪುಡಿ – 1/2 ಚಮಚ
  • ಒಣ ಮೆಣಸಿನಕಾಯಿ ಪುಡಿ – 1 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಎಲೆಕೋಸು ತುರಿ, ಗಜ್ಜರಿ ತುರಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಮೆಕ್ಕೆ ಜೋಳದ ಹಿಟ್ಟು, ಮೈದಾ ಹಿಟ್ಟು, ಒಣ ಮೆಣಸಿನಕಾಯಿ ಪುಡಿ, ಗರಮ್ ಮಸಾಲೆ ಪುಡಿ, ಒಂದು ಚಮಚ ಕಾದ ಎಣ್ಣೆ, ಒಂದು ಚಮಚ ನೀರು ಮತ್ತು ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಹಿಟ್ಟನ್ನು ಕಲಸಿಕೊಳ್ಳಿ. ನಂತರ ಕಾದ ಎಣ್ಣೆಯಲ್ಲಿ ಪಕೋಡಾ ಮಾಡಿ ಕರಿದು ತೆಗೆದಿಡಿ.

ಮಂಚೂರಿಯನ್ ಗ್ರೇವಿ ಮಾಡುವ ಬಗೆ

ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಮಿಕ್ಸರ್ ನಲ್ಲಿ ಟೊಮೋಟೊ ರುಬ್ಬಿ ಇಟ್ಟುಕೊಳ್ಳಿ. ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಹಸಿ ಶುಂಟಿ ಅರೆದು ಇಟ್ಟುಕೊಳ್ಳಿ. ಒಂದು ಬಾಣಲೆಗೆ ಮೂರು ಚಮಚದಶ್ಟು ಎಣ್ಣೆ ಹಾಕಿ ಬಿಸಿ ಮಾಡಿ, ಅರೆದಿರುವ ಹಸಿ ಮೆಣಸಿನಕಾಯಿ, ಶುಂಟಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ನಂತರ ಕತ್ತರಿಸಿದ ಈರುಳ್ಳಿ ಮತ್ತು ರುಬ್ಬಿದ ಟೊಮೋಟೊ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಮೂರು ಚಮಚ ನೀರು ಸೇರಿಸಿ ಉಪ್ಪು, ಒಣ ಮೆಣಸಿನಕಾಯಿ ಪುಡಿ, ಗರಮ್ ಮಸಾಲೆ ಪುಡಿ ಜೊತೆಗೆ ಸ್ವಲ್ಪ ಸಕ್ಕರೆ ಹಾಕಿ, ಒಂದು ಕುದಿ ಕುದಿಸಿ. ಸ್ವಲ್ಪ ಗಟ್ಟಿ ಆಗುತ್ತಿದ್ದಂತೆ ಒಲೆ ಆರಿಸಿ.

ಕರಿದ ಪಕೋಡಾವನ್ನು ಈ ಗ್ರೇವಿಯಲ್ಲಿ ಕಲಸಿ, ಒಂದು ತಟ್ಟೆಗೆ ಹಾಕಿ. ಮೇಲೆ ಕ್ಯಾರೆಟ್ ತುರಿ, ಎಲೆಕೋಸಿನ ತುರಿ, ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ಬಿಸಿ ಬಿಸಿ ಎಲೆಕೋಸು ಕ್ಯಾರೆಟ್ ಮಂಚೂರಿಯನ್ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *