ಕವನ – ಜಿಟಿ ಜಿಟಿ ಮಳೆ
ಜಿಟಿ ಜಿಟಿ ಮಳೆಯ ಆಲಿಂಗನ
ಮನವ ಮುದಗೊಳಿಸಿದೆ
ಆ ಮನದೊಳಗಿನಾ ಹೊಸ ಹೊಸ
ಬಯಕೆಗಳು ಚಿಗುರುತ್ತಿವೆ
ಹಳೆಯದೆಲ್ಲವ ಮರೆತು
ಕಾರ‍್ಮೊಡ ಕರಗಿ ಹನಿಯಾಗುತ್ತಿರುವಾಗ
ಬದುಕ ಕಶ್ಟಗಳು ಕರಗುತ್ತಿರುವ ಹಾಗೆ ಬಾಸವಾಗುತ್ತಿದೆ
ಮಳೆಹನಿಗಳು ಮುಕವ ಸವರುತ್ತಿರುವಾಗ
ಮನದೊಳಗೆ ಸಂತೋಶದ ಚಿಲುಮೆ ಉಕ್ಕುತ್ತಿದೆ
ತಂಪಾದ ಗಾಳಿ
ಹೊಸದೊಂದು ಚೈತನ್ಯವ ನೀಡುತ್ತಿದೆ
ಮತ್ತೆ ರೆಕ್ಕೆ ಕಟ್ಟಿ ಬಾನಂಗಳದಿ ಹಾರಲು
ಸ್ವಚ್ಚಂದದಿ ಮತ್ತೆ ಬದುಕ ಕಟ್ಟಿಕೊಳ್ಳಲು
ಗುಡುಗು ಸಿಡಿಲ ಅರ‍್ಬಟ
ಬದುಕ ಸತ್ಯವ ತಿಳಿಸುತ್ತಿವೆ
ಇಲ್ಲಿ ಯಾವುದು ಶಾಶ್ವತವಲ್ಲ
ಎಲ್ಲವೂ ಕ್ಶಣಿಕ ಎಂಬುದ
ಇಳೆಯ ತಂಪಾಗಿಸಿದ ಮಳೆಯು
ನಿಂತಿದೆ ಮನವ ಮುದಗೊಳಿಸಿ
ಇತ್ತೀಚಿನ ಅನಿಸಿಕೆಗಳು