ಕಡಲೆಕಾಳು ಪಂಚಕಜ್ಜಾಯ

– ಸವಿತಾ.

ಬೇಕಾಗುವ ಸಾಮಾನುಗಳು

  • ಕಡಲೆಕಾಳು – 1 ಬಟ್ಟಲು
  • ಏಲಕ್ಕಿ – 2
  • ಲವಂಗ – 2
  • ಬಾದಾಮಿ – 6
  • ಗೋಡಂಬಿ – 6
  • ಒಣ ದ್ರಾಕ್ಶಿ – 6
  • ಚಕ್ಕೆ – 1/4 ಇಂಚು
  • ತುಪ್ಪ – 2 ಚಮಚ
  • ಎಳ್ಳು – 1/2 ಬಟ್ಟಲು
  • ಒಣ ಕೊಬ್ಬರಿ ತುರಿ – 1 ಬಟ್ಟಲು
  • ಬೆಲ್ಲದ ಪುಡಿ – 1.5 ಬಟ್ಟಲು
  • ಹುರಿಗಡಲೆ – 1/2 ಬಟ್ಟಲು (ಬೇಕಾದರೆ)

ಮಾಡುವ ಬಗೆ

ಕಡಲೆಕಾಳು ಹುರಿದು ತೆಗೆಯಿರಿ. ಹುರಿಗಡಲೆ ಹುರಿದು ತೆಗೆಯಿರಿ (ಇದು ಬೇಡ ಎಂದರೆ ಬಿಡಬಹುದು). ಎಳ್ಳು ಹುರಿದು ತೆಗೆದಿಡಿ. ಒಣ ಕೊಬ್ಬರಿ ತುರಿದು ಇಟ್ಟುಕೊಳ್ಳಿ. ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ, ಕರಗಲು ಬಿಡಿ. ಕಡಲೆಕಾಳನ್ನು ಮಿಕ್ಸರ್ ನಲ್ಲಿ ಹಾಕಿ, ಹಿಟ್ಟು ಮಾಡಿಟ್ಟುಕೊಳ್ಳಿ. ಉಳಿದ ಸಾಮಗ್ರಿಗಳನ್ನೂ ಸಹ ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ.

ಬೆಲ್ಲದ ನೀರನ್ನು ಬಿಸಿಮಾಡಿ, ಒಂದು ಎಳೆ ಪಾಕ ಮಾಡಿ, ಈ ಮೊದಲು ಮಾಡಿಟ್ಟುಕೊಂಡ ಎಲ್ಲಾ ಪುಡಿಗಳನ್ನು ಹಾಕಿ ಚೆನ್ನಾಗಿ ಕಲಸಿ, ಒಲೆ ಆರಿಸಿ ಇಳಿಸಿ. ಏಲಕ್ಕಿ, ಲವಂಗ ಮತ್ತು ದಾಲ್ಚಿನ್ನಿ ಪುಡಿ ಮಾಡಿ ಸೇರಿಸಿ. ತುಪ್ಪ ಬಾಣಲೆಗೆ ಹಾಕಿ ಬಿಸಿ ಮಾಡಿ, ಗೋಡಂಬಿ, ಬಾದಾಮಿ ಕತ್ತರಿಸಿ ಹಾಕಿ ಹುರಿಯಿರಿ. ಸ್ವಲ್ಪ ಒಣ ದ್ರಾಕ್ಶಿ ಹಾಕಿ ಒಲೆ ಆರಿಸಿ. ಇದನ್ನು ಮಾಡಿಟ್ಟ ಪುಡಿಗೆ ಸೇರಿಸಿ, ಚೆನ್ನಾಗಿ ಕಲಸಿ ಆರಲು ಬಿಡಿ. ಗಣಪನ ನೈವೇದ್ಯಕ್ಕೆ ಪಂಚಕಜ್ಜಾಯ ರೆಡಿ. ನೈವೇದ್ಯ ಮಾಡಿ ಪ್ರಸಾದ ಹಂಚಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks