ಕವಿತೆ: ನಂಬಿ ಕೆಟ್ಟವರಿಲ್ಲವೋ
ಬದುಕಿನ ಬಂಡಿಯು ಸಾಗಲು
ಬೇಕು ನಂಬಿಕೆ ಎಂಬ ಗಾಲಿ
ನಂಬಿಕೆಯಿಟ್ಟು ಮುನ್ನಡೆಯದಿದ್ದರೆ
ಜೀವನವೇ ಕಾಲಿ ಕಾಲಿ
ಹುಟ್ಟುವ ಪ್ರತಿ ಕೂಸಿಗೂ
ತನ್ನ ಹೆತ್ತವರ ಮೇಲೆ ನಂಬಿಕೆ
ರೆಕ್ಕೆ ನಂಬಿ ಹಾರಾಡುವ ಹಕ್ಕಿಗೂ
ಬಾನೆತ್ತರಕ್ಕೆ ಹಾರಲು ಇಲ್ಲ ಯಾವ ಅಂಜಿಕೆ
ಪರಸ್ಪರ ನಂಬಿಕೆ ಇದ್ದರೆ
ಸ್ವರ‍್ಗಕ್ಕೂ ಕಿಚ್ಚು ಹಚ್ಚುವಂತಹ ಬಾಳು
ಅಪನಂಬಿಕೆಯ ಅಪಸ್ವರ ಎದ್ದರೆ
ಕಾಡ್ಗಿಚ್ಚಿನಂತೆ ಉರಿದು ಬರೀ ಗೋಳು
ನಡೆಯಲ್ಲಿ ವಿಶ್ವಾಸ ಉಳಿದರೆ
ನಂಬಿಕೆಯ ಬುನಾದಿ ಉಳಿದೀತು
ಅವಿಶ್ವಾಸ ಎದುರಾದರೆ
ನಂಬಿಕೆಯ ಪರಮಾರ‍್ತವೇ ಅಳಿದೀತು
( ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು