ಕವಿತೆ: ಸ್ವಪ್ನ ಸಕಿ

– .

ದ್ವೀಪದೊಳಗಿನ ದೀಪವಾಗಿ
ಹೊಳೆದೆಯಲ್ಲ ಸಕಿ
ಜಲದೊಳಗಿನ ಸೆಲೆಯಾಗಿ
ಉಳಿದೆಯಲ್ಲ ಸಕಿ

ಹ್ರುದಯವೀಣೆಯ ನಾದಲಹರಿ
ಹರಿಯುತಿದೆ ಏಕೆ
ಗುಡಿಯೊಳಗಿನ ಶಿಲೆಯಾಗಿ
ಮೊಳೆದೆಯಲ್ಲ ಸಕಿ

ಕದ್ಯೋತದ ಬೆಳಕಿನಲ್ಲಿ
ಹೊರಟಿಹ ಚೆಲುವೆ
ಅಲರೊಳಗಿನ ಮದುವಾಗಿ
ಸೆಳೆದೆಯಲ್ಲ ಸಕಿ

ಶಿಕರದೆತ್ತರದ ಒಲುಮೆಯನು
ಅರಸಿದ ಅರಸಿ
ಪುಟದೊಳಗಿನ ಪದವಾಗಿ
ಎಳೆದೆಯಲ್ಲ ಸಕಿ

ಅಬಿನವನ ಮನದಂಗಳದಲ್ಲಿ
ಮಿನುಗಿರುವೆ
ಸ್ವಪ್ನದೊಳಗಿನ ಚಿತ್ರವಾಗಿ
ಸುಳಿದೆಯಲ್ಲ ಸಕಿ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *