ಹಾಗಲಕಾಯಿ ಚಟ್ನಿ

– ಸವಿತಾ.

ಬೇಕಾಗುವ ಸಾಮಾನುಗಳು

  • ಹಾಗಲಕಾಯಿ – 2
  • ಬೆಲ್ಲ – 1 ಚಮಚ
  • ಎಣ್ಣೆ – 2 ಚಮಚ
  • ಚಕ್ಕೆ – 1/4 ಇಂಚು
  • ಜೀರಿಗೆ – 1 ಚಮಚ
  • ಉಪ್ಪು ರುಚಿಗೆ ತಕ್ಕಶ್ಟು
  • ಬೆಳ್ಳುಳ್ಳಿ ಗಡ್ಡೆ – 1 ಗಡ್ಡೆ
  • ಹಸಿ ಮೆಣಸಿನಕಾಯಿ – 6
  • ಹಸಿ ಶುಂಟಿ – 1/4 ಇಂಚು
  • ತೆಂಗಿನ ತುರಿ – 1 ಬಟ್ಟಲು
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಹಸಿ ಹುಣಸೆಕಾಯಿ – 1/2 ಅತವಾ ಹುಣಸೆ ಹಣ್ಣು ರಸ – 2 ಚಮಚ

ಮಾಡುವ ಬಗೆ

ಹಾಗಲಕಾಯಿಯನ್ನು ಕೆಂಡದ ಮೇಲೆ ಅತವಾ ಗ್ಯಾಸ್ ಮೇಲೆ ತವೆ ಇಟ್ಟು ಸುಡಬೇಕು. ಸುಟ್ಟ ಹಾಗಲಕಾಯಿಯನ್ನು ಕತ್ತರಿಸಿ, ಬೀಜ ತೆಗೆಯಿರಿ. ಬಾಣಲೆಗೆ ಎಣ್ಣೆ ಹಾಕಿ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಹಸಿ ಶುಂಟಿ, ಜೀರಿಗೆ, ಚಕ್ಕೆ, ಹಾಗಲಕಾಯಿ ಸಣ್ಣದಾಗಿ ಕತ್ತರಿಸಿ ಇನ್ನೊಮ್ಮೆ ಹುರಿದು ತೆಗೆಯಿರಿ. ಆರಿದ ನಂತರ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು, ಹುಣಸೆಕಾಯಿ, ಬೆಲ್ಲ ಸೇರಿಸಿ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ. ಬೇಕಾದರೆ ಸಾಸಿವೆ, ಕರಿಬೇವು ಮತ್ತು ಇಂಗು ಒಗ್ಗರಣೆ ಕೊಡಬಹುದು. ಈಗ ಹಾಗಲ ಕಾಯಿ ಚಟ್ನಿ ಸವಿಯಲು ಸಿದ್ದ. ಹಾಗಲಕಾಯಿ ಚಟ್ನಿ ಮತ್ತು ತುಪ್ಪ ಸೇರಿಸಿ, ಬಿಸಿ ಜೋಳದ ರೊಟ್ಟಿ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks