ಬ್ಯಾಸಿಗಿ ಕಾಲ

– ಸವಿತಾ.

besigebara

ಸುಡುವ ನೆಲ,
ಬತ್ತಿದ ಜಲ,
ಊರಿಗೆ ಊರು,
ಬಣ ಬಣ

ಹೆಚ್ಚಿದ ಬಿಸಿಲಿಗೆ ಜಳ,
ನೀರಿಗೂ ಬಂತು ಬರ,
ಉಣ್ಣಾಕ ಇಲ್ಲ,
ಕೈಯಿಗೆ ಕೆಲಸ ಇಲ್ಲ,
ಬರೀ ಬೆವರು ಜಳಕ;

ಗುಳೆ ಹೊರಟ ಹಳ್ಳಿ ಜನ
ಇಣುಕಿದರಆಶ್ಟು ಮಳೆರಾಯ
ತುಂತುರು ಹನಿ ಸಡಗರ
ಕ್ಶಣಾರ‍್ದದಲ್ಲಿ ಮಾಯ
ನೆರಳಿಗೂ ಇಲ್ಲ, ಒಂದು ಮರ

ದಹಿಸುವ ಬ್ಯಾಸಿಗಿ ಕಾಲ,
ಬೇಡವೇ ಬೇಡ,
ಮರ ಗಿಡ ನೆಡುವ;
ಗೋಶಣಾ ವಾಕ್ಯ,
ಪಲಕ ನಕ್ಕ್ಹಂಗ ಕಂಡಾವ

ಬಂಜರು ಬೂಮಿ,
ತಣಿಸಲು ಬಾ ಮಳೆರಾಯ,
ನಿಗಿ ನಿಗಿ ಬ್ಯಾಸಿಗಿಗೇ,
ಸೊರಗ್ಯಾರ ಜನ ನೋಡಾ

(ಚಿತ್ರ ಸೆಲೆ:  creative.sulekha.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks