ಬೂದುಗುಂಬಳ ದೋಸೆ ಮತ್ತು ಉತ್ತಪ್ಪ

– ಸವಿತಾ.

ಬೇಕಾಗುವ ಪದಾರ‍್ತಗಳು

  • ಅಕ್ಕಿ – 2 ಲೋಟ
  • ಈರುಳ್ಳಿ – 1
  • ಎಣ್ಣೆ – 1 ಬಟ್ಟಲು
  • ಜೀರಿಗೆ – 1/2 ಚಮಚ
  • ಉಪ್ಪು ರುಚಿಗೆ ತಕ್ಕಶ್ಟು
  • ಕ್ಯಾರೆಟ್ ತುರಿ – 1 ಕಪ್
  • ಹಸಿ ಮೆಣಸಿನಕಾಯಿ – 2
  • ಬೂದುಗುಂಬಳಕಾಯಿ – 1
  • ಸೌತೆಕಾಯಿ ತುರಿ – 1 ಕಪ್
  • ಕೊತ್ತಂಬರಿ ಸೊಪ್ಪು ಸ್ವಲ್ಪ
  • ನೀರು – 2+1/4 ಲೋಟ (ಎರಡೂ ಕಾಲು ಲೋಟ)

ಮಾಡುವ ಬಗೆ

ಅಕ್ಕಿಯನ್ನು ಎರಡು ಲೋಟ ನೀರಿನಲ್ಲಿ ನಾಲ್ಕು ತಾಸು ನೆನೆಸಿ, ರುಬ್ಬುವಾಗ ಅದೇ ನೀರು, ಬೂದುಗುಂಬಳಕಾಯಿ ಸಿಪ್ಪೆ ನಡುವಿನ ತಿರುಳು ತೆಗೆದು ಬರೀ ಗಟ್ಟಿ ತುರಿ ಮಾತ್ರ ಹಾಕಿಕೊಂಡು ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಬೇಕು. ನೀರು ಕಾಲು ಲೋಟ ಅಶ್ಟೇ ಹಾಕಿ, ರಾತ್ರಿ ರುಬ್ಬಿ ಇಟ್ಟುಕೊಳ್ಳಿ. ಬೆಳಿಗ್ಗೆ ಹಸಿ ಮೆಣಸಿನಕಾಯಿ, ಜೀರಿಗೆ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಅರೆದು ಸೇರಿಸಿ. ಹೀಗೆ ದೋಸೆ ಮಾಡಬಹುದು.

ಸೌತೆಕಾಯಿ ತುರಿ, ಕ್ಯಾರೇಟ್ ತುರಿ, ಸಣ್ಣ ಕತ್ತರಿಸಿದ ಈರುಳ್ಳಿ ಜೊತೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿಕೊಂಡು, ಕಾದ ತವೆಯ ಮೇಲೆ ಉತ್ತಪ್ಪ ಹಾಕಿ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿ ತೆಗೆದರೆ ಬೂದುಗುಂಬಳ ಉತ್ತಪ್ಪ ಸವಿಯಲು ಸಿದ್ದ. ತುಂಬಾ ಆರೋಗ್ಯಕರ ದೋಸೆ ಹಾಗೂ ಉತ್ತಪ್ಪ ಮಾಡಿ ಸವಿಯಿರಿ. ಕೊಬ್ಬರಿ ಚಟ್ನಿ ಜೊತೆ ಕೂಡ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: