ಕವಿತೆ: ಕನ್ನಡಿಗರು ನಾವು

– ವೆಂಕಟೇಶ ಚಾಗಿ.

ಕನ್ನಡ ತಾಯಿ, Kannada tayi

ಕಬ್ಬಿಣ ದೇಹದ ಕಲ್ಲಿನ ಮೇಲೆ
ಕಾವ್ಯದ ಬೆಳೆಯನು ಬೆಳೆದವರು
ಜನಪದ ಕಲೆಗಳ ಲೋಕವನೆ
ಮನೆ-ಮನದಲ್ಲಿ ಕಂಡವರು

ವಿಜ್ನಾನದ ಸಾದನೆ ಶಿಕರದಿ
ಚಿನ್ನದ ಅಕ್ಶರ ಬರೆದವರು
ಕಸ್ತೂರಿ ನುಡಿಯ ಚಂದದ ನಡೆಯ
ತಪಸ್ಸಿನ ಪಲ ಪಡೆದವರು

ಕವಿಗಳ ಹ್ರುದಯದ ಅರಮನೆಯಲ್ಲಿ
ಕಾವ್ಯ ಕಜಾನೆಯ ದನಿಕರು
ಕಲೆ ಸಂಗೀತ ಕ್ರೀಡಾ ಬಾಶ್ಯವ
ಉಸಿರುಸಿರಲಿ ನುಡಿದವರು

ಕನ್ನಡಿಗರೆಂಬ ಶಾಶ್ವತ ದಿರಿಸು
ದರಿಸಿದ ಪಾವನ ಕನ್ನಡಿಗರು
ಬಾರತ ಮಾತೆ ಕುವರಿಯ ಪುತ್ರರು
ಜಗದಲಿ ಹೆಮ್ಮೆಯ ಕನ್ನಡಿಗರು

(ಚಿತ್ರ ಸೆಲೆ: feelsomu.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: