ಸೀಬೆಹಣ್ಣಿನ ಗೊಜ್ಜು

– ಸವಿತಾ.

ಬೇಕಾಗುವ ಸಾಮಾನುಗಳು

  • ಸೀಬೆಹಣ್ಣು – 3
  • ಉದ್ದಿನ ಬೇಳೆ -1 ಚಮಚ
  • ಎಳ್ಳು -1/2 ಚಮಚ
  • ಮೆಂತೆ ಕಾಳು – 1/4 ಚಮಚ
  • ಒಣ ಮೆಣಸಿನಕಾಯಿ – 6-8
  • ಹಸಿ ಕೊಬ್ಬರಿ ತುರಿ – 1/4 ಕೊಬ್ಬರಿ
  • ಕರಿಬೇವು – ಸ್ವಲ್ಪ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಹುಣಸೇ ಹಣ್ಣು -1/2 ನಿಂಬೆ ಹಣ್ಣಿನಶ್ಟು
  • ಬೆಲ್ಲ – 1 ಚಮಚ
  • ಎಣ್ಣೆ – 2 ಚಮಚ
  • ಸಾಸಿವೆ – 1/2 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು
  • ಅರಿಶಿಣ ಪುಡಿ – ಸ್ವಲ್ಪ

ಮಾಡುವ ಬಗೆ

ಹುಣಸೇ ಹಣ್ಣು ನೆನೆ ಹಾಕಿ ರಸ ತೆಗೆದಿಡಬೇಕು. ಉದ್ದಿನ ಬೇಳೆ, ಮೆಂತೆ ಕಾಳು, ಎಳ್ಳು, ಒಣ ಮೆಣಸಿನಕಾಯಿ ಹುರಿದು ತೆಗೆದಿಡಿ. ಹಸಿ ಕೊಬ್ಬರಿ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ. ಸೀಬೆಹಣ್ಣನ್ನು ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ.

ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಒಗ್ಗರಣೆ ಮಾಡಿಕೊಳ್ಳಿ. ಸಾಸಿವೆ, ಕರಿಬೇವು ಹಾಕಿ ಹುರಿಯಿರಿ. ನಂತರ ಕತ್ತರಿಸಿದ ಸೀಬೆ ಹಣ್ಣಿನ ಹೋಳು ಹಾಕಿ ಚೆನ್ನಾಗಿ ಹುರಿಯಿರಿ. ಉಪ್ಪು ಅರಿಶಿಣ ಪುಡಿ ಸೇರಿಸಿ. ನಂತರ ರುಬ್ಬಿದ ಕೊಬ್ಬರಿ ಮಸಾಲೆ ಹಾಕಿ ಹುರಿಯಿರಿ. ಸ್ವಲ್ಪ ನೀರು ಹಾಕಿ ಒಂದು ಕುದಿ ಕುದಿಸಿ. ಹುಣಸೇ ರಸ ಸೇರಿಸಿ ಮತ್ತು ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ಇಳಿಸಿ. ಈಗ ಸೀಬೆ ಹಣ್ಣು ಅತವಾ ಪೇರಲ ಹಣ್ಣಿನ ಗೊಜ್ಜು ಸವಿಯಲು ಸಿದ್ದ. ಇದನ್ನು ಚಪಾತಿ, ಅನ್ನದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: