ಕವಿತೆ: ಆರ‍್ಯಬಟರ ಕನಸು

– ಚಂದ್ರಗೌಡ ಕುಲಕರ‍್ಣಿ.

ದೇಶದ ಮೊದಲ ವಸತಿ ಶಾಲೆಗೆ
ನಳಂದ ಎಂಬುದು ಹೆಸರು
ಮಗದ ಪ್ರಾಂತದ ಗುಪ್ತರ ಕೊಡುಗೆ
ಸಕಲ ವಿದ್ಯೆಯ ತವರು

ಹತ್ತು ಸಾವಿರ ವಿದ್ಯಾರ‍್ತಿಗಳು
ಬೋದಕರು ಸಹಸ್ರ ಎರಡು
ಗಣಿತ ಕಗೋಲ ಲಲಿತ ಕಲೆಗಳು
ರಾಜ ನೀತಿಯ ಸೂಡು

ವಿಶ್ವದ ಎಲ್ಲೆಡೆ ಕೀರ‍್ತಿ ಗಳಿಸಿತು
ಆರ‍್ಯಬಟರ ಕೂಸು
ಅರಳಿಸಿಬಿಟ್ಟಿತು ಹರ‍್ಶವರ‍್ದನ
ನಾಗಾರ‍್ಜುನರ ಕನಸು

ಅನುಪಮ ಜ್ನಾನ ಗ್ರಂತಾಲಯಕೆ
ದ್ವೇಶದ ಬೆಂಕಿಯ ಹಚ್ಚಿ
ತಿಂಗಳವರೆಗೆ ಉರಿವುದ ಕಂಡು
ಕಂಗಾಲಾದರು ಬೆಚ್ಚಿ

ಕಟ್ಟಡ ಜೊತೆಯಲಿ ಉರುಳಿಬಿದ್ದವು
ಗೌತಮ ಬುದ್ದನ ಪ್ರತಿಮೆ
ಬರತ ಸಂಸ್ಕ್ರುತಿ ಅಳಿಸಲು ಮಾಡಿದ
ದುರುಳರ ಗೈಮೆ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: