ಕವಿತೆ: ನಾ ಏನು ಮಾಡಲಿ ನೀ ಮೊದಲಿನಂತಾಗಲು!

ಚಂದ್ರಿಕಾ ಬಚ್ಚೇಗೌಡ.

ಜೊತೆ ಜೊತೆಯಲಿ ನಲಿಯುತ ಬೆಳೆದೆವು
ಎಶ್ಟೋ ಬಾರಿ ಮುನಿಸಿಕೊಂಡೆವು
ಆದರೂ ನೀ ಬೇಕೆಂದಳು

ಜೊತೆ ಜೊತೆಯಲಿ ನಡೆದೆವು
ನಲಿ ನಲಿಯುತ ಕೂಡಿ ಆಡಿದೆವು
ನಗುವಾಗ ಕೂಡಿ ನಲಿದೆವು
ನೋವಿನಲಿ ದುಕ್ಕ ಪಟ್ಟೆವು
ನನಗೆ ನೋವಾದಾಗ ನಾನಿರುವೆ
ಎಂದು ದೈರ‍್ಯ ತುಂಬಿದಳು
ಇಂದು ಏಕೋ ಮೌನವಾದಳು
ಎಲ್ಲವ ಮರೆತಳು

ನಂಬಲಾರದಶ್ಟು ಬದಲಾದಳು
ಏಕೆ ಇಶ್ಟು ಮೌನವಾದಳು?
ಏಕೆ ನನ್ನನ್ನು ದೂರಮಾಡಿದಳು?
ಎಶ್ಟೋ ಬಾರಿ ಜಗಳವಾಡಿದ್ದೆವು
ಆಗ ನಾವಿಬ್ಬರು ಹಾಗೆಯೆ ಎನ್ನುತಿದ್ದವಳು
ಇಂದು ನನ್ನನ್ನು ಮರೆತಳು

ನಾ ಏನು ಮಾಡಲಿ ನೀ ಮೊದಲಿನಂತಾಗಲು!

( ಚಿತ್ರಸೆಲೆ : theconversation.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications