ಕವಿತೆ : ಹೂ ಮಾತು

ದ್ವಾರನಕುಂಟೆ ಪಿ. ಚಿತ್ತನಾಯಕ.

ಗಾಳಿಯೊಳಗೆ ತೂಗುವಾಸೆ
ನನ್ನ ಮೈ ಮನ
ಎಲೆಯ ನಡುವೆ ಹೂವಿನಂತೆ
ನನ್ನ ಈ ಮನ

ದುಂಬಿ ಸೋಕದಂತೆ ಇರದು
ನನ್ನ ಬಾಳು
ಹೊಸತು ನಗೆಯ ಪ್ರೀತಿಯಲ್ಲಿ
ಈ ಹಾಡು

ಸುತ್ತ ಮುಳ್ಳು ಹೂವು ನಗೆಗೆ
ಅರಳಿ ನಿಂತರೆ
ಕತ್ತಲಿಹುದು ದುಂಬಿಯೊಂದು
ಬಂದು ಕುಂತಡೆ

ಹೂವು ಮುಳ್ಳು ದುಂಬಿ ಆಟ
ದಿನವು ನೂಕಲು
ಚಿಗುರು ಕಾಯಿ ಹಣ್ಣು ಕೂಟ
ಇರುವ ತಿಳಿಸಲು

ದಿನದ ಬದುಕು ಮುಗಿಸಬೇಕು
ಗಾಳಿ ಸೇರಿಯೆ
ನಗುವ ಹೂವು ಮೂಡಬೇಕು
ಬಳ್ಳಿಯೊಂದಿಗೆ

ಮನದ ಬಯಕೆ
ತೂಗುತಿರಲಿ ಬೆಳಕಿನಲ್ಲಿಯೆ
ತೊಟ್ಟು ಕಳಚಲೊಂದು
ಇರುಳು ಕನಸಿನಂತೆಯೇ

( ಚಿತ್ರಸೆಲೆ : wikipedia.org )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: