ಚಾಕೋ‍‍ಲೇಟ್ ರವೆ ಕೇಕ್

– ಸವಿತಾ.

ಬೇಕಾಗುವ ಸಾಮಾನುಗಳು

  • ತುಪ್ಪ ಅತವಾ ಎಣ್ಣೆ – ಅರ‍್ದ ಲೋಟ
  • ಮೊಸರು – ಅರ‍್ದ ಲೋಟ
  • ಬೆಲ್ಲದ ಪುಡಿ ಅತವಾ ಸಕ್ಕರೆ ಪುಡಿ – 1 ಲೋಟ
  • ಹಾಲು – ಅರ‍್ದ ಲೋಟ
  • ಗೋದಿ ರವೆ (ಉಪ್ಪಿಟ್ಟು ರವೆ) – ಒಂದೂವರೆ ಲೋಟ
  • ಅಡುಗೆ ಸೋಡಾ – 1 ಚಮಚ
  • ಕೋಕೋ ಪುಡಿ ಅತವಾ ಬೌರ್ನ್‍‍ವೀಟಾ ಪುಡಿ – 1 ಅತವಾ 2 ಚಮಚ
  • ಏಲಕ್ಕಿ – 2
  • ಲವಂಗ – 2
  • ಚಕ್ಕೆ – 1 ಇಂಚು ಉದ್ದ
  • ಜಾಯಿಕಾಯಿ ಪುಡಿ – ಸ್ವಲ್ಪ
  • ಬಾದಾಮಿ, ಗೋಡಂಬಿ, ಮತ್ತು ಒಣ ದ್ರಾಕ್ಶಿ – ಬೇಕಾದಲ್ಲಿ ಸ್ವಲ್ಪ ಹಾಕಿ

ಮಾಡುವ ಬಗೆ

ಒಂದು ಪಾತ್ರೆಗೆ ತುಪ್ಪ ಮತ್ತು ಮೊಸರು ಹಾಕಿ ಚೆನ್ನಾಗಿ ತಿರುಗಿಸಿ. ನಂತರ ಬೆಲ್ಲದ ಪುಡಿ ಹಾಕಿ ಚೆನ್ನಾಗಿ ತಿರುಗಿಸಿಕೊಳ್ಳಿ. ಆಮೇಲೆ ಅಡುಗೆ ಸೋಡಾ, ಏಲಕ್ಕಿ, ಲವಂಗ, ಚಕ್ಕೆ ಪುಡಿಮಾಡಿ ಹಾಕಿ ಮತ್ತು ಇದಕ್ಕೆ ರವೆ ಸೇರಿಸಿ ಚೆನ್ನಾಗಿ ಕಲಸಿ. ಹಾಲಿನಲ್ಲಿ ಕೋಕೋ ಪುಡಿ ಅತವಾ ಬೌರ್ನ್‍‍ವೀಟಾ ಪುಡಿ ಹಾಕಿ ಕರಗಿಸಿ ನಂತರ ಹಾಲು ಸೇರಿಸಿ ಚೆನ್ನಾಗಿ ಕಲಸಿ ಅರ‍್ದ ಗಂಟೆ ನೆನೆಯಲು ಬಿಡಬೇಕು. ಕುಕ್ಕರ್‍‍ನಲ್ಲಿ ಒಂದೂವರೆ ಲೋಟ ಮರಳು(ಉಸುಕು) ಹಾಕಿ. ನಂತರ ಒಂದು ಸ್ಟೀಲ್ ತಟ್ಟೆ ಅತವಾ ಸ್ಟ್ಯಾಂಡ್ ಇಡಬೇಕು. ನಂತರ ಗ್ಯಾಸ್ಕೆಟ್, ವಿಶಲ್ ತೆಗೆದು ಮುಚ್ಚಳ ಮುಚ್ಚಿ ಹತ್ತು ನಿಮಿಶ ಬಿಸಿಮಾಡಿ ಒಲೆ ಆರಿಸಿ. ಈಗ ಒಂದು ಸ್ಟೀಲ್ ಡಬ್ಬಿ ಅತವಾ ಪಾತ್ರೆಗೆ ತುಪ್ಪ ಸವರಿ ನಂತರ ಈ ಮಿಶ್ರಣ ಸುರಿಯಿರಿ. ನಂತರ ಕುಕ್ಕರ್‍‍ನಲ್ಲಿ ಒಂದು ತಟ್ಟೆ ಅತವಾ ಸ್ಟ್ಯಾಂಡ್ ಇಟ್ಟು ಅದರ ಮೇಲೆ ಡಬ್ಬಿ ಅತವಾ ಪಾತ್ರೆ ಇಟ್ಟು ಕುಕ್ಕರ್ ಮುಚ್ಚಳ ಮುಚ್ಚಿ(ಗ್ಯಾಸ್ಕೆಟ್ ವಿಶಲ್ ತೆಗೆಯಿರಿ). ತದನಂತರ ಮದ್ಯಮ ಉರಿಯಲ್ಲಿ 45 ನಿಮಿಶ ಬೇಯಿಸಬೇಕು. ನಂತರ ಒಲೆ ಆರಿಸಿ ಹತ್ತು ನಿಮಿಶ ಬಿಟ್ಟು ಕೇಕ್ ತೆಗೆಯಿರಿ. ಈಗ ಚಾಕೋ‍‍ಲೇಟ್ ಕೇಕ್ ಸವಿಯಲು ಸಿದ್ದ. ಇದು ಸಾದಾ ಚಾಕೊಲೇಟ್ ಕೇಕ್ ಮಾಡುವ ವಿದಾನವಾಗಿದ್ದು, ಇದಕ್ಕೆ ಟುಟಿ ಪ್ರೂಟಿ ಡ್ರೈ ಪ್ರೂಟ್ಸ್ ಹಾಕಿ ಕೂಡ ಕೇಕ್ ಮಾಡಬಹುದು.

 

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: