ಚಾಕೋಲೇಟ್ ಉಂಡೆಗಳು

– ಸವಿತಾ.

ಬೇಕಾಗುವ ಸಾಮಾನುಗಳು

  • ಹಾಲು – 2 ಲೋಟ
  • ಮೊಸರು – 1 ಲೋಟ
  • ಬೆಲ್ಲದ ಪುಡಿ ಅತವಾ ಸಕ್ಕರೆ – ಅರ‍್ದ ಲೋಟ
  • ಕೋಕೋ ಪುಡಿ ಅತವಾ ಬೋರ್ನ್‍‍‍ವೀಟಾ ಪುಡಿ – ಅರ‍್ದ ಲೋಟ
  • ತುಪ್ಪ – 4 ಚಮಚ
  • ಬಾದಾಮಿ ಗೋಡಂಬಿ – ಹೋಳುಮಾಡಿದ್ದು ಸ್ವಲ್ಪ

ಮಾಡುವ ಬಗೆ

ಮೊದಲಿಗೆ ಹಾಲನ್ನು ಕಾಯಲು ಇಡಿ. ಆಮೇಲೆ ಇದಕ್ಕೆ ಮೊಸರು ಮತ್ತು ಕೋಕೋ ಪುಡಿ ಹಾಕಿ. ನಂತರ ಬೆಲ್ಲ ಅತವಾ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿರಿ. ಇದರ ನಡು ನಡುವೆ ತುಪ್ಪ ಹಾಕಿ ತಳ ಹಿಡಿಯದಂತೆ ಗಟ್ಟಿ ಆಗುವವರೆಗೆ ತಿರುಗಿಸಿ ನೋಡಿಕೊಂಡು ಒಲೆ ಆರಿಸಿ. ನೀರಿನ ಅಂಶ ಹೋಗುವವರೆಗೂ ಕೈಯ್ಯಾಡಿಸಿ ಇಳಿಸಿ. ಆಮೇಲೆ ಗೋಡಂಬಿ ಮತ್ತು ಬಾದಾಮಿಯನ್ನು ಪುಡಿಮಾಡಿಕೊಂಡು ಚಾಕೋ‍‍ಲೇಟ್ ಉಂಡೆಮಾಡಿ ಉರುಳಿಸಿ ಇಡಿ. ಈಗ ರುಚಿ ರುಚಿಯಾದ ಚಾಕೋ‍‍ಲೇಟ್ ಬಾಲ್ಸ್ ಸವಿಯಲು ಸಿದ್ದವಾಗಿದೆ. ಈ ಆರೋಗ್ಯಕರ ಚಾಕೋ‍‍ಲೇಟ್ ಬಾಲ್ಸನ್ನು ಮಕ್ಕಳು ಹೆಚ್ಚಾಗಿ ಇಶ್ಟ ಪಟ್ಟು ತಿನ್ನುತ್ತಾರೆ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: