ಮಕ್ಕಳ ಕವಿತೆ: ನನ್ನ ಪುಟ್ಟ ತಂಗಿ

– ವೆಂಕಟೇಶ ಚಾಗಿ.

ಪುಟ್ಟ ಪುಟ್ಟ ಹೆಜ್ಜೆ ಇಡುತಾ
ನನ್ನ ತಂಗಿ ಬರುವಳು
ಅಣ್ಣಾ ಎಂದು ತೊದಲು ನುಡಿದು
ನನ್ನ ಮನವ ಸೆಳೆವಳು

ತಿನ್ನಲು ಒಂದು ಹಣ್ಣು ಕೊಡಲು
ನನ್ನ ಬಳಿಗೆ ಬರುವಳು
ಅಲ್ಪಸ್ವಲ್ಪ ಹಣ್ಣು ತಿಂದು
ಮನೆಯ ತುಂಬಾ ಎಸೆವಳು

ಕಣ್ಣಾ ಮುಚ್ಚೆ ಕಾಡೆಗೂಡೆ
ಆಟ ಆಡು ಎನುವಳು
ಅಮ್ಮನಿಂದ ಅಡಗಿ ಕುಳಿತು
ನಕ್ಕು ನನ್ನ ಕರೆಯುವಳು

ನನ್ನ ಕಾರು ನನ್ನ ಗೊಂಬೆ
ತನಗೂ ಬೇಕು ಎನುವಳು
ಕೊಡುವ ತನಕ ಹಟವಮಾಡೇ
ಅಪ್ಪ ಅಮ್ಮ ಬರುವರು

ನನ್ನ ತಂಗಿ ಪುಟ್ಟ ತಂಗಿ
ಇವಳು ನನಗೆ ಹೆಮ್ಮೆಯೂ
ನನ್ನ ತಂಗಿ ನಗುತಲಿರಲು
ನನಗೆ ತುಂಬಾ ಹರುಶವು

( ಚಿತ್ರಸೆಲೆ: openclipart.org

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: