ಕವಿತೆ: ದೇವರ ಕಲ್ಪನೆ

– .

ವರ, boon

ಸಕಲ ಜೀವಚರಗಳ
ಉಸಿರು ನಿನ್ನಿಂದ
ಅನ್ನೋ ನಂಬಿಕೆ
ನಿನಗೆ ಬದುಕಲು
ಕೊಡುವನು ದನ ಕನಕ ಸಂಪತ್ತು

ಮೌಡ್ಯತೆಯೋ ಬಯವೋ
ನಂಬಿಕೆಯೋ ತಿಳಿಯದೋ

ನಿನ್ನ ಅಪ್ಪಣೆ ಇಲ್ಲದೆ
ಹುಲ್ಲುಕಡ್ಡಿಯೂ ಅಲ್ಲಾಡದು
ಹೇಳಿದರು ತಿಳಿದವರು
ಸಕಲವೂ ನೀನೆ ಸರ‍್ವಸ್ವವೂ ನೀನೆ
ನಾಕಾಣೆ ನಿನಗೇಕೆ ಕಾಣಿಕೆ

ನಿನ್ನ ನಾಮದಿ ಪೂಜೆ
ಪುನಸ್ಕಾರ ಪಲವು
ಅದಕ್ಕೊಂದು ಚೀಟಿ
ವಸೂಲಿ ದನ ಕನಕ ವಜ್ರ ವೈಡೂರ‍್ಯ

ನಿನ್ನ ಲೀಲೆ ಬಲ್ಲವರಾರು
ಅಂದರು ದೊಡ್ಡವರು
ತಿಳಿದು ಮಾಡಿದರು
ದೋಶ ಪರಿಹಾರದ
ನೆವದಲಿ ಸುಲಿಗೆ

ಮಾನವನ ಮೀರಿದ
ಶಕ್ತಿಯೊಂದಿಹುದೆಂದು
ನನ್ನ ನಂಬಿಕೆ

ಬರಿಯ ಕಲ್ಲ ಆರಾದಿಸೋದೋ
ಇಲ್ಲವೋ ತಿಳಿಯದಾದೆ ನೀನೆನಗೆ

(ಚಿತ್ರಸೆಲೆ : jagannathpurihkm.wordpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: