ದೀಪಾವಳಿ ಬೆಳಕು

ಪ್ರವೀಣ್  ದೇಶಪಾಂಡೆ.

www.hdnicewallpapers.com

ಇಲ್ಲದ ನಗುವ
ಕೊಳ್ಳಿರೊ,
ಬೆಲೆ ಇಲ್ಲದ
ಬದುಕ ಮಾರುವವನ
ಹತ್ತಿರ,
ಚೂರು ನೆಮ್ಮದಿಯ
ಇಎಮ್‍ಐ ಕಟ್ಟಿ,
ದೀಪಾವಳಿಗೆ
ಬೆಳಕಿನ
ಬಂಪರ್ ಆಪರ‍್ರು,
ಎದೆಯ ಕತ್ತಲ
ಕಳೆದು ಕೊಳ್ಳಿರೊ,
ಒಂದು ರೂಪಾಯಿಯ
ಒಲವ ಹಣತೆ
ಹಚ್ಚಿಟ್ಟು,
ಸುಮ್ಮನೆ ದುಡಿ
ಮನಸಿಟ್ಟು
ಚೆಂದಗೆ,
ಕುಶಿಯ
ಪಗಾರ
ಜಮೆಯಾಗುತ್ತದೆ
ಚಿತ್ತದ
ಅಕೌಂಟಿಗೆ,
ಅದನೆ ತಿನ್ನು
ಅದನೆ ಹಂಚು,
ಒಳಗೆಲ್ಲ
ತಿಂಗಳ ಬೆಳಕು,
ಅದಕೆ
ತಿಳುಮೆ
ಒಂದನೆ ತಾರೀಕು.
ಕಣ್ಣ ಬೆಳಕ
ಅಲ್ಲಿಲ್ಲಿ ಏಕೆ
ಹುಡುಕುತಿ,
ಎಲ್ಲ ಕತ್ತಲೆ ಎಂದು
ಹಣತೆ ಹಚ್ಚಿಕೊಂಡವನೇನು
ಹುಚ್ಚನೆ?
ಇರಬಹುದು
ಜಗತ್ತಿಗೆ
ಹಚ್ಚಿಟ್ಟ ದೀಪದೆದುರು
ಅಸ್ತಿತ್ವವೆಲ್ಲಿ
ಕತ್ತಲೆಗೆ
ಬೆಳಕ ಹಾವಳಿ
ದೀಪಾವಳಿ.
ಕುಣಿವ ಕತ್ತಲೆಗೆ
ಬರಲಿ ಬಿಡಿ
ಬವಳಿ.

(ಚಿತ್ರ ಸೆಲೆ: hdnicewallpapers.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks