ಕವಿತೆ: ನಾವೆಲ್ಲರೂ ಒಂದೇ

– .

ದರ‍್ಮಗಳು ಹತ್ತಾರಾದರೂ
ಮನೋದರ‍್ಮವು ಒಂದೇ
ಬಾಶೆಗಳು ನೂರಾದರೂ
ಅಬಿಲಾಶೆಯು ಒಂದೇ

ರಾಜ್ಯಗಳು ಇಪ್ಪತ್ತೆಂಟಾದರೂ
ಏಕತೆಯ ಸಾಮ್ರಾಜ್ಯವು ಒಂದೇ
140 ಕೋಟಿ ಕಂಟಗಳಾದರೂ
ರಾಶ್ಟ್ರಗೀತೆಯು ಒಂದೇ

280 ಕೋಟಿ ಕೈಗಳಾದರೂ
ಐಕ್ಯತೆಯ ಚಪ್ಪಾಳೆಯು ಒಂದೇ
ಸಂಸ್ಕ್ರುತಿ ಹತ್ತು ಹಲವಾದರೂ
ಜೀವನ ಪ್ರೀತಿಯು ಒಂದೇ

ಆರ‍್ಯ ದ್ರಾವಿಡರು ಬೇರೆಯಾದರೂ
ಬಾರತಾಂಬೆಯ ಮಡಿಲು ಒಂದೇ
ಗಂಗಾ ಕಾವೇರಿ ಬೇರೆಯಾದರೂ
ಹರಿಯುವ ಬೂ ಒಡಲು ಒಂದೇ

ಕೇಸರಿ ಬಿಳಿ ಹಸಿರು ಬಣ್ಣ ಬೇರೆಯಾದರೂ
ಆಶೋಕ ಚಕ್ರದ ತ್ರಿವರ‍್ಣ ದ್ವಜವೊಂದೇ
ಜೀವನ ತತ್ವ ಸಿದ್ದಾಂತಗಳು ಬೇರೆಯಾದರೂ
ಬಾರತೀಯರು ನಾವೆಲ್ಲರೂ ಒಂದೇ

( ಚಿತ್ರ ಸೆಲೆ:   indiaflag.facts.co )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. MANJUNATHA Y says:

    ಸೂಪರ್

MANJUNATHA Y ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *