ಕವಿತೆ: ಮಾತುಗಳು ಚುಚ್ಚಿದರೆ…

– ವಿನು ರವಿ.

ಮನಸು, Mind, memories, ನೆನಪು

ಸೂಜಿ ಚುಚ್ಚಿದರೆ
ಹರಿದ ಬಟ್ಟೆಗಳ
ಒಂದುಗೂಡಿಸುತ್ತದೆ
ಮ್ರುದುವಾದ ಹೂಗಳ
ಪೋಣಿಸಿ ಹೂಮಾಲೆ ಕಟ್ಟುತ್ತದೆ
ಹೊಕ್ಕಿದ ಮುಳ್ಳ ತೆಗೆದು
ಜೀವ ಹಗುರಾಗಿಸುತ್ತದೆ

ಮಾತುಗಳು ಚುಚ್ಚಿದರೆ
ಸಂಬಂದಗಳು ಹರಿದು
ಹೋಗುತ್ತವೆ
ಮ್ರುದುವಾದ ಮನಸುಗಳು
ಕದಡುತ್ತವೆ
ಎದೆಯಾಳದ ನೋವು
ಹೆಚ್ಚುತ್ತದೆ

(ಚಿತ್ರಸೆಲೆ : sloanreview.mit.edu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: