ಲವ್ ಮಾಕ್ಟೇಲ್-2 ಹೇಗಿದೆ?

ಪ್ರಿಯದರ‍್ಶಿನಿ ಮುಜಗೊಂಡ

ಹೆಚ್ಚಾಗಿ ಸಿನಿಪ್ರಿಯರೆಲ್ಲರೂ ಲವ್ ಮಾಕ್ಟೇಲ್-1 ಸಿನೆಮಾವನ್ನು ನೋಡಿರಬಹುದು. ಒಂದುವೇಳೆ ನೋಡಿಲ್ಲ ಅಂದ್ರೆ ಮೊದಲು ಲವ್ ಮಾಕ್ಟೇಲ್-1 ಸಿನಿಮಾ ನೋಡಿ, ಆಮೇಲೆ ಲವ್ ಮಾಕ್ಟೇಲ್-2 ನೋಡಿ. ಅಂದಹಾಗೆ ಲವ್ ಮಾಕ್ಟೇಲ್-1 ರಲ್ಲಿ ಅದಿತಿಯ ಕಾರ್ ಕೆಟ್ಟು ಹೋಗಿದ್ದರಿಂದ, ಆದಿ ಅಕೆಯನ್ನು ಕರೆದುಕೊಂಡು ಹೋಗುವಾಗ ತನ್ನ ಹೈಸ್ಕೂಲ್ ಲವ್ ಸ್ಟೋರಿಗಳನ್ನೆಲ್ಲಾ ಹೇಳುತ್ತಾ, ಸುಶ್ಮಾಳಿಂದ ಪರಿಚಯವಾದ ಜೋ (ಜೋಶಿತ)ಳ ಪ್ರೀತಿ, ಪ್ರೀತಿಯಲ್ಲಿನ ಒಡಕು, ಮುಂದೆ ಪ್ರೀತಿಸಿ ಮದುವೆಯಾದ ನಿದಿಯನ್ನು ಒಂದು ವರ‍್ಶದಲ್ಲೆ ಕಳೆದುಕೊಂಡಿದ್ದು ಲವ್ ಮಾಕ್ಟೇಲ್-1 ರ ಕತಾಹಂದರವಾಗಿದೆ.

ಲವ್ ಮಾಕ್ಟೇಲ್-2 ಸಿನಿಮಾ ಬಗ್ಗೆ ಹೇಳೋದಾದ್ರೆ, ಅದು ಇದರ ಮುಂದುವರಿದ ಬಾಗ. ಪಸ್ಟ್ ಹಾಪ್ ನೋಡ್ತಾ ಹೋದ್ರೆ ಕಾಮಿಡಿ, ಒಳ್ಳೆ ಹಾಡುಗಳು, ಪ್ರತಿಯೊಂದು ದ್ರುಶ್ಯ ನಿಮ್ಮನ್ನ ಮುಂದಿನ ದ್ರುಶ್ಯದೆಡೆಗೆ ಸೆಳೆಯುತ್ತಾ ಹೋಗುತ್ತದೆ. ವಿಶೇಶವಾಗಿ ಹೇಳೋದಾದ್ರೆ, ಉತ್ತರ ಕರ‍್ನಾಟಕದ ಬಾಶೆಯ ಸೊಗಡನ್ನು ಚೆನ್ನಾಗಿ ತೋರಿಸಿದ್ದಾರೆ. ಇನ್ನು ಸೆಕೆಂಡ್ ಹಾಪ್ ನೋಡಿದ್ರೆ, ಸುತ್ತಲೂ ಹಸಿರಾದ ನಿಸರ‍್ಗದ ಅನುಬವ, ಪ್ರೀತಿ ಅನ್ನೋದು ಕೇವಲ ಒಂದು ಬಾವನೆಯಶ್ಟೇ ಅಲ್ಲ, ಅದು ಒಬ್ಬ ವ್ಯಕ್ತಿಯ ಅಸ್ತಿತ್ವ. ಅದು ಕಣ್ಣಿಗೆ ಕಾಣದಿದ್ದರೂ ನಮ್ಮ ನೆನಪಲ್ಲಿ ಶಾಶ್ವತವಾಗಿ ಉಳಿಯುವಂತದ್ದು ಎಂಬುದನ್ನು ತೋರಿಸಲಾಗಿದೆ. ಇನ್ನುಳಿದಂತೆ ಹಾಡುಗಳು, ಅದರಲ್ಲಿನ ಸಾಲುಗಳಂತೂ ನಮ್ಮಲ್ಲಿ ಬೇರೆಯ ಜಗತ್ತನ್ನೇ ಸ್ರುಶ್ಟಿಸುತ್ತವೆ. ಕೊನೆಗೆ ಜೀವನದಲ್ಲಿ ಏನೇ ಆದ್ರೂ ಅದಕ್ಕೊಂದು ಒಳ್ಳೆ ಕಾರಣ ಇರುತ್ತದೆ. ಆಗೋದೆಲ್ಲಾ ಒಳ್ಳೇದಕ್ಕೆ, ಆದ್ರೇ ಆಗಿದ್ದೆಲ್ಲಾ ಒಳ್ಳೇದಕ್ಕೇನಾ ಅಂತ ಸಮಯವೇ ಸಾಬೀತು ಮಾಡುತ್ತದೆ. ಅಲ್ಲಿವರೆಗೂ ಕಾಯವ ತಾಳ್ಮೆ ನಮ್ಮಲ್ಲಿರಬೇಕು ಅಶ್ಟೇ. ಒಬ್ಬ ವ್ಯಕ್ತಿಯ ಜೀವನಕ್ಕೆ ಸಂಪೂರ‍್ಣ ಅರ‍್ತ ಸಿಗಬೇಕು ಅಂದ್ರೆ ಆ ವ್ಯಕಿಯ ಜೀವನದಲ್ಲಿ ಅರ‍್ತ ಪೂರ‍್ಣವಾದ ಗಟನೆಗಳು ನಡೆದಿರಬೇಕು, ಆಗಲೇ ಅದಕ್ಕೊಂದು ಬೆಲೆ. ಜೀವನದಲ್ಲಿ ಎಲ್ಲಾ ಕಳೆದುಕೊಂಡ ಆದಿ, ನಿದಿಯ ಸಾವಿನಿಂದ ಹೊರ ಬರದೆ, ಮಾನಸಿಕ ಕಿನ್ನತೆಗೆ ಒಳಗಾಗಿರುತ್ತಾನೆ. ಇದನ್ನೆಲ್ಲಾ ಮರೆತು ಆದಿ ಮದುವೆಯಾಗುತ್ತಾನೋ ಇಲ್ಲವೋ? ಒಂದುವೇಳೆ ಮದುವೆಯಾದಲ್ಲಿ ಯಾರನ್ನ ಆಗ್ತಾನೆ? ಕೊನೆಯಲ್ಲಿ ಆದಿಯ ಜೀವನಕ್ಕೆ ಅರ‍್ತ ಸಿಗುತ್ತಾ? ಆಗೋದೆಲ್ಲ ಒಳ್ಳೆದೇನಾ? ಆಗಿದ್ದೆಲ್ಲಾ ಒಳ್ಳೆದಕ್ಕೇನಾ? ಇದನ್ನೆಲ್ಲಾ ತಿಳಿಯಲು ತಿಯೇಟರ್ ಗೇ ಹೋಗಿ ಸಿನಿಮಾ ನೋಡಬೇಕು.

ಇದೇ ರೀತಿ ಈ ಸಿನಿಮಾ ಅತ್ಯಂತ ಚೆನ್ನಾಗಿ ಮೂಡಿಬರಲು ಮುಕ್ಯ ಕಾರಣ ಚಿತ್ರದಲ್ಲಿನ ಚಾಯಾಗ್ರಹಣ. ಇದನ್ನು ಮಾಡಿರುವವರು  ಕ್ರೇಜಿಮೈಂಡ್ಜ್ (crazymindz). ನಿಸರ‍್ಗದಲ್ಲಿ ಹೆಚ್ಚಾಗಿ ಚಿತ್ರೀಕರಿಸಿರುವುದರಿಂದ ಸನ್ನಿವೇಶಗಳು ಅದ್ಬುತವಾಗಿ ಮೂಡಿ ಬಂದಿದ್ದು, ಈ ಮೂಲಕ ಕ್ರೇಜಿಮೈಂಡ್ಜ್ ತಮ್ಮ ಅತ್ಯುತ್ತಮ ಪ್ರತಿಬೆಯನ್ನು ತೋರಿಸಿದ್ದಾರೆ. ಸಂಗೀತ ನಿರ‍್ದೇಶನ ಮಾಡಿರುವ ನಕುಲ್ ಅಬಯಂಕರ್ ಅವರು ಹಾಡಿನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ರಾಗವೇಂದ್ರ ಕಾಮತ್ ರವರು “ನಿನದೇನೇ ಜನುಮಾ”, “ಸಂಚಾರಿಯಾಗು ನೀ”, “ಇದೇ ಸ್ವರ‍್ಗ”, “ಈ ಪ್ರೇಮ” ಈ ಹಾಡುಗಳಿಗೆ ಅತ್ಯುತ್ತಮ ಸಾಹಿತ್ಯ ನೀಡಿ ಜನರ ಮನ ಕಲುಕಿದ್ದಾರೆ. ಇನ್ನು ಡಾರ‍್ಲಿಂಗ್ ಕ್ರಿಶ್ಣ, ಮಿಲನಾ ನಾಗರಾಜ್, ಕುಶಿ ಆಚಾರ್, ಅಬಿಲಾಶ್, ರೇಚಲ್ ಡೇವಿಡ್, ಅಮ್ರುತ ಅಯ್ಯಂಗಾರ್, ಸುಶ್ಮಿತಾ ಗೌಡ ಮತ್ತು ರಚನಾ ಇಂದರ್ ಇವರೆಲ್ಲ ಜನರ ಮನಸ್ಸಿನಲ್ಲಿ ಎಲ್ಲಾ ತರಹದ ಬಾವನೆಗಳ ಒಗ್ಗರಣೆ ಹಾಕಿದ್ದಾರೆ. ಕತೆ-ಚಿತ್ರಕತೆ-ನಿರ‍್ದೇಶನ ಈ ಮೂರನ್ನು ಅಚ್ಚುಕಟ್ಟಾಗಿ ನಿರ‍್ವಹಿಸಿ, ಜನರಿಗೆ ಇಶ್ಟವಾಗುವಂತೆ ಹೆಣೆದು ಕನ್ನಡ ಚಿತ್ರರಂಗದಲ್ಲೇ ಹೊಸ ಚಾಪನ್ನು ಮೂಡಿಸಲು ಹೊರಟಿರುವ ಡಾರ‍್ಲಿಂಗ್ ಕ್ರಿಶ್ಣ ಹಾಗೂ ಮಿಲನಾ ನಾಗರಾಜ್ ರವರಿಂದ ಇನ್ನಶ್ಟು ಒಳ್ಳೆಯ ಚಿತ್ರಗಳನ್ನು ನಿರೀಕ್ಶಿಸುತ್ತೇವೆ. ಗಮನ, ಮಿಲನ, ಕದನ, ಪಯಣ, ಜೀವನ, ಬಾವನೆಗಳ ಸಮ್ಮಿಲನವೇ ಈ ಲವ್ ಮಾಕ್ಟೇಲ್-2.

(ಚಿತ್ರ ಸೆಲೆ: filmibeat.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: