ಬೆಳ್ಳುಳ್ಳಿ ಅನ್ನ

– ಸವಿತಾ.

ಬೇಕಾಗುವ  ಸಾಮಾನುಗಳು

 • ಅನ್ನ – 2 ಬಟ್ಟಲು
 • ಬೆಳ್ಳುಳ್ಳಿ ಎಸಳು – 2 ಗಡ್ಡೆ
 • ಈರುಳ್ಳಿ – 1
 • ಹಸಿ ಮೆಣಸಿನಕಾಯಿ – 2
 • ಒಣ ಮೆಣಸಿನಕಾಯಿ – 1
 • ಒಣ ಕಾರದ ಪುಡಿ – ಅರ‍್ದ ಚಮಚ
 • ಕಡಲೆ ಬೇಳೆ – ಅರ‍್ದ ಚಮಚ
 • ಉದ್ದಿನ ಬೇಳೆ – ಅರ‍್ದ ಚಮಚ
 • ಕಡಲೆ ಬೀಜ – ಅರ‍್ದ ಚಮಚ
 • ಹುರಿಗಡಲೆ/ಪುಟಾಣಿ – ಅರ‍್ದ ಚಮಚ
 • ಗೋಡಂಬಿ – 4 ( ಬೇಕಾದ್ದಲ್ಲಿ )
 • ಒಣ ದ್ರಾಕ್ಶಿ – 4 ( ಬೇಕಾದ್ದಲ್ಲಿ )
 • ಎಣ್ಣೆ ಅತವಾ ತುಪ್ಪ – 3 ಚಮಚ
 • ಸಾಸಿವೆ – ಅರ‍್ದ ಚಮಚ
 • ಜೀರಿಗೆ – ಅರ‍್ದ ಚಮಚ
 • ನಿಂಬೆ ರಸ – ಅರ‍್ದ ಹೋಳಿನಶ್ಟು
 • ಉಪ್ಪು ರುಚಿಗೆ ತಕ್ಕಶ್ಟು
 • ಅರಿಶಿಣ ಪುಡಿ ಸ್ವಲ್ಪ
 • ಕರಿಬೇವು ಎಲೆ ಸ್ವಲ್ಪ
 • ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ಬಗೆ

ಮೊದಲಿಗೆ ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿರಿ. ಆಮೇಲೆ ಬೆಳ್ಳುಳ್ಳಿ ಎಸಳು ಬಿಡಿಸಿ, ಹಸಿ ಮೆಣಸಿನಕಾಯಿ ಸೇರಿಸಿ ಅರೆದು ಸ್ವಲ್ಪ ಪೇಸ್ಟ್ ಮಾಡಿಟ್ಟುಕೊಳ್ಳಿರಿ. ಆಮೇಲೆ ಸಣ್ಣದಾಗಿ ಈರುಳ್ಳಿ ಕತ್ತರಿಸಿಟ್ಟುಕೊಳ್ಳಿರಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಲು ಇಡಿ. ಒಗ್ಗರಣೆಗೆ ಸಾಸಿವೆ, ಜೀರಿಗೆ ಕರಿಬೇವು, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ನಂತರ ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಮೆಣಸಿನಕಾಯಿ ಮುರಿದು ಹಾಕಿ ಹುರಿಯಿರಿ. ಆಮೇಲೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಆಮೇಲೆ ಕಡಲೆ ಬೀಜ, ಹುರಿಗಡಲೆ, ಗೋಡಂಬಿ, ಒಣ ದ್ರಾಕ್ಶಿ ಸ್ವಲ್ಪ ಹಾಕಿ ಹುರಿಯಿರಿ. ರುಚಿಗೆ ತಕ್ಕಶ್ಟು ಉಪ್ಪು ಹಾಕಿ. ನಂತರ ಅರಿಶಿಣ ಪುಡಿ ಸೇರಿಸಿ, ಒಣ ಕಾರದ ಪುಡಿ ಸೇರಿಸಿ ಚೆನ್ನಾಗಿ ಹುರಿದು ಒಲೆ ಆರಿಸಿ. ಈಗ ಇದಕ್ಕೆ ನಿಂಬೆ ಹಣ್ಣಿನ ರಸ ಹಿಂಡಿ ಅನ್ನ ಹಾಕಿ ಕಲಸಿ ಇನ್ನೊಮ್ಮೆ ಬಿಸಿ ಮಾಡಿರಿ. ಅಲಂಕಾರಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಉದುರಿಸಿರಿ. ಈಗ ಬೆಳ್ಳುಳ್ಳಿ ಅನ್ನ ಸವಿಯಲು ಸಿದ್ದವಾಗಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: