ಬಟಾಣಿ-ರವೆ ದೋಸೆ

– ಸವಿತಾ.

ಬೇಕಾಗುವ ಸಾಮಾನುಗಳು

 • ಉಪ್ಪಿಟ್ಟು ರವೆ – 1 ಲೋಟ
 • ಕಡಲೇ ಹಿಟ್ಟು – 1/2 ಲೋಟ
 • ಗೋದಿ ಹಿಟ್ಟು – 1/2 ಲೋಟ
 • ಹಸಿ ಬಟಾಣಿ – 1 ಲೋಟ
 • ಹಸಿ ಮೆಣಸಿನಕಾಯಿ – 4
 • ಜೀರಿಗೆ – 1/2 ಚಮಚ
 • ಅಜಿವಾಯಿನ್ ಅತವಾ ಓಂ ಕಾಳು – 1/4 ಚಮಚ
 • ಈರುಳ್ಳಿ – 1
 • ಎಣ್ಣೆ – 1 ಲೋಟ
 • ಹಸಿ ಶುಂಟಿ – 1/4 ಇಂಚು
 • ಬೆಳ್ಳುಳ್ಳಿ – 4 ಎಸಳು
 • ಗರಮ್ ಮಸಾಲೆ ಪುಡಿ – 1/2 ಚಮಚ(ಬೇಕಾದರೆ)
 • ಕತ್ತರಿಸಿದ ಕೊತ್ತಂಬರಿ ಸೊಪ್ಪು – 1/2 ಲೋಟ
 • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ರವೆ, ಕಡಲೇ ಹಿಟ್ಟು, ಗೋದಿ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಇಟ್ಟುಕೊಳ್ಳಿ. ಹಸಿ ಬಟಾಣಿ, ಹಸಿ ಮೆಣಸಿನಕಾಯಿ, ಹಸಿ ಶುಂಟಿ, ಬೆಳ್ಳುಳ್ಳಿ ಎಸಳು, ಜೀರಿಗೆ, ಓಂ ಕಾಳು ಸ್ವಲ್ಪ ಉಪ್ಪು ಸೇರಿಸಿ ಒಂದು ಸುತ್ತು ಮಿಕ್ಸರ್ ನಲ್ಲಿ ತಿರುಗಿಸಿ ಹಿಟ್ಟಿಗೆ ಸೇರಿಸಿ. ಬೇಕಿದ್ದರೆ ಗರಮ್ ಮಸಾಲೆ ಪುಡಿ ಹಾಕಿ. ಎರಡು ಚಮಚ ಎಣ್ಣೆ, ಉಪ್ಪು ರುಚಿಗೆ ತಕ್ಕಶ್ಟು, ನೀರು ಸೇರಿಸಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ.

ಕೊತ್ತಂಬರಿ ಸೊಪ್ಪು, ಈರುಳ್ಳಿ ಕತ್ತರಿಸಿ ಇಟ್ಟುಕೊಳ್ಳಿ. ಕಾದ ತವೆ ಮೇಲೆ ದೋಸೆ ಹಾಕಿರಿ. ಮೇಲೆ ಸ್ವಲ್ಪ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಉದುರಿಸಿ ಎರಡೂ ಬದಿ ಬೇಯಿಸಿ ತೆಗೆಯಿರಿ. ಈಗ ಬಟಾಣಿ-ರವೆ ದೋಸೆ ಸವಿಯಲು ಸಿದ್ದ. ತೆಂಗಿನ ಕಾಯಿ ಚಟ್ನಿ, ಮೊಸರು ಇಲ್ಲವೇ ಸಾಸ್ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: