ಬಟಾಣಿ ಸಾಗು
– ಸವಿತಾ.
ಬೇಕಾಗುವ ಸಾಮಾನುಗಳು
- ಹಸಿ ಬಟಾಣಿ – ಕಾಲು ಕಿಲೋ
- ಈರುಳ್ಳಿ – 2
- ಟೊಮೆಟೊ – 2
- ಹಸಿ ಶುಂಟಿ – ಅರ‍್ದ ಇಂಚು
- ಬೆಳ್ಳುಳ್ಳಿ – 10 ಎಸಳು
- ಕರಿಬೇವು ಎಲೆ – 10
- ಕೊತ್ತಂಬರಿ ಸೊಪ್ಪು – 10 ಕಡ್ಡಿ
- ಹಸಿ ಕೊಬ್ಬರಿತುರಿ – 4 ಚಮಚ
- ಏಲಕ್ಕಿ – 1
- ಲವಂಗ – 2
- ಕರಿಮೆಣಸಿನಕಾಳು – 4
- ಚಕ್ಕೆ – ಅರ‍್ದ ಇಂಚು
- ಗಸಗಸೆ – ಅರ‍್ದ ಚಮಚ
- ಹುರಿಗಡಲೆ – 2 ಚಮಚ
- ಹಸಿಮೆಣಸಿನಕಾಯಿ – 2
- ಒಣಮೆಣಸಿನಕಾಯಿ – 2
- ಉಪ್ಪು ರುಚಿಗೆ ತಕ್ಕಶ್ಟು
- ಅರಿಶಿಣಪುಡಿ ಸ್ವಲ್ಪ
- ಎಣ್ಣೆ – 3 ಚಮಚ
- ಸಾಸಿವೆ – ಕಾಲು ಚಮಚ
- ಜೀರಿಗೆ – ಕಾಲು ಚಮಚ
ಮಾಡುವ ಬಗೆ
ಮೊದಲಿಗೆ ಈರುಳ್ಳಿ, ಟೊಮೆಟೊ ಮತ್ತು ಹಸಿಮೆಣಸಿನಕಾಯಿ ಕತ್ತರಿಸಿಟ್ಟುಕೊಳ್ಳಿರಿ. ಹಸಿ ಶುಂಟಿ, ಬೆಳ್ಳುಳ್ಳಿ ಅರೆದಿಟ್ಟುಕೊಳ್ಳಿರಿ. ಮಿಕ್ಸರ್ ಜಾರ್ ನಲ್ಲಿ ಕತ್ತರಿಸಿದ ಈರುಳ್ಳಿಯ ಅರ‍್ದ ಮಾತ್ರ ಹಾಕಿಕೊಳ್ಳಿರಿ. ಆಮೇಲೆ ಹಸಿಮೆಣಸಿನಕಾಯಿ ಹಾಕಿರಿ. ಆಮೇಲೆ ಏಲಕ್ಕಿ, ಲವಂಗ, ಕರಿಮೆಣಸಿನಕಾಳು, ಚಕ್ಕೆ, ಗಸಗಸೆ, ಹುರಿಗಡಲೆ, ಒಣಮೆಣಸಿನಕಾಯಿ, ಕೊಬ್ಬರಿತುರಿ, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ತೆಗೆಯಿರಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಆಮೇಲೆ ಸಾಸಿವೆ, ಜೀರಿಗೆ ಹಾಕಿ ಹುರಿಯಿರಿ. ನಂತರ ಕರಿಬೇವು, ಹಸಿ ಶುಂಟಿ ಮತ್ತು ಬೆಳ್ಳುಳ್ಳಿ ಹಾಕಿ ಹುರಿಯಿರಿ. ಆಮೇಲೆ ಉಳಿದರ‍್ದ ಈರುಳ್ಳಿ, ಕತ್ತರಿಸಿಟ್ಟ ಟೊಮೆಟೊ, ಹಸಿ ಬಟಾಣಿ ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ರುಬ್ಬಿದ ಮಿಶ್ರಣ ಹಾಕಿ ಹುರಿಯಿರಿ. ಉಪ್ಪು ರುಚಿಗೆ ತಕ್ಕಶ್ಟು ಹಾಕಿರಿ. ನಂತರ ಸ್ವಲ್ಪ ಅರಿಶಿಣ ಹಾಕಿ ಮತ್ತು ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ, ಒಲೆ ಆರಿಸಿ. ಈಗ ಬಟಾಣಿ ಸಾಗು ಸವಿಯಲು ಸಿದ್ದವಾಗಿದ್ದು, ಅನ್ನ, ಚಪಾತಿ ಮತ್ತು ದೋಸೆ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು