ಹಾಯ್ಕುಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಸುಡು ನೆಲ್ದಾಗ
ತಲಿ ಮ್ಯಾಲಿನ್ ಗಡ್ಗಿನೂ
ಕಣ್ಣೀರ್ ಹಾಕ್ತದ ||

******

ನೀ ಸುಳ್ಳಾಡಿದ್ರೂ
ನಿಜವ ಹೇಳತೈತಿ
ಮುಕ ಕನ್ನಡಿ ||

******

ಹೊಲಿಯಬೇಕು
ಹರಕು ಬಾಯಿಗಳ
ತುಟಿಗಳನು ||

******

ದುಡಿವರೆಲ್ಲ
ರವಿಯಾದಿ ನಿತ್ಯವೂ
ಪ್ರಶಸ್ತಿಗಲ್ಲ ||

******

ಕೆಸರಿನ ಕೈ
ಸದ್ದು ಮದ್ದಿಲ್ದೆ ಗೆದ್ದು
ಹೆಸರಾಯಿತು ||

******

ಪುಟ್ಟ ಗೂಡಲ್ಲಿ
ಬೆಟ್ಟ ಕಟ್ಟಿದವನು
ಬಡವ ಅಪ್ಪ||

(ಚಿತ್ರಸೆಲೆ : professionalstudies.educ.queensu.ca)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

Enable Notifications