ಗಜಲ್

– .

life, happy, sad, ಬದುಕು, ನಗು. ಅಳು

ಹಣಕ್ಕಾಗಿ ಹೆಣಗಾಡಿ
ಹೆಣವಾಗುವೇಕೆ ಮನುಜ
ಹೆಣ್ಣಿಗಾಗಿ ತಿಣುಕಾಡಿ
ಕಣ್ ಮುಚ್ಚುವೆಯೇಕೆ ಮನುಜ

ಮಣ್ಣಿಗಾಗಿ ಕಾದಾಡಿ
ಮಣ್ಣಾಗುವೇಯೇಕೆ ಮನುಜ
ರುಣವಿಲ್ಲದ್ದಕ್ಕೆ ಕಿತ್ತಾಡಿ
ಪ್ರಾಣಬಿಡುವೆಯೇಕೆ ಮನುಜ.

ಮೂರು ದಿನದ ಬಾಳಲ್ಲಿ ಹಾರಾಡಿ
ಬಾಳಲ್ಲಿ ಕಾಲಕಸವಾಗುವೆಯೇಕೆ ಮನುಜ
ನೂರಾರು ಸುಳ್ಳು ಬರವಸೆ ನೀಡಿ
ವಿಶ್ವಾಸ ದ್ರೋಹಿಯಾಗುವೆಯೇಕೆ ಮನುಜ

ನಾನು ನನ್ನೆಂದು ಮೆರೆದಾಡಿ
ಏನಿಲ್ಲದಂತಾಗುವೆಯೇಕೆ ಮನುಜ
ನಶ್ವರದ ಬಾಳಿಗೆ ಪೇಚಾಡಿ
ಈಶ್ವರನ ಮರೆಯುವೆಯೇಕೆ ಮನುಜ

ತಿಳಿದು ಕೂಡ ತಪ್ಪು ಮಾಡಿ
ತಿಳಿಗೇಡಿಯಾಗುವೆಯೇಕೆ ಮನುಜ
ಶಿವನಾಡಿದ ಅನುಬವ ನುಡಿ
ಕಡೆಗಣಿಸಿ ಬಾಳುವೆಯೇಕೆ ಮನುಜ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks