ಹಾಯ್ಕುಗಳು

ವೆಂಕಟೇಶ ಚಾಗಿ.

ನ್ಯಾನೊ ಕತೆಗಳು, Nano Stories

ಆ ದೇವರಿಗೂ
ಸತ್ಯ ಕಾಣುವುದಿಲ್ಲ
ದೀಪವಿಲ್ಲದೆ ||

******

ದೀಪಕ್ಕೂ ಬಯ
ಸತ್ತು ಹೋಗುವೆನೆಂದು
ಹಸಿವಿನಿಂದ ||

******

ದೀಪ ಹೊತ್ತಿದೆ
ಗುಡಿಸಿಲಿನಲ್ಲಿ
ಕಣ್ಣೀರಿನಿಂದ ||

******

ಅಲ್ಲೊಂದು ದೀಪ
ನಂದಿ ಕತ್ತಲಾಗಿದೆ
ಎಣ್ಣೆಯಿಲ್ಲದೆ ||

******

ಮನೆಯ ಸೂರ‍್ಯ
ಮನೆಯ ಬೆಳಗುತ್ತ
ಬದುಕ ಉಂಡ ||

( ಚಿತ್ರಸೆಲೆ : quirkybyte.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks