ಕವಿತೆ: ಲೆಕ್ಕಚಾರದ ಬದುಕು

– .

ಸಿಟ್ಟು ಅಸಮಾದಾನ ದ್ವೇಶ ಅಸೂಯೆಗಳ
ವಿಶಕಾರೋ ಸರ‍್ಪಗಳು ನಾವು
ಆರಡಿ ಮೂರಡಿ ಜಾಗ
ಎಲ್ಲಿಹುದೋ ತಿಳಿಯದ ನಮಗೆ
ಬೂ ಮಂಡಲವನೆ ಗೆಲ್ಲುವ ಆಸೆ

ಕೋಟಿ ಕೋಟಿ ಕೂಡಿಟ್ಟರೇನು
ಆಸ್ತಿ ಪಾಸ್ತಿ ಮಾಡಿಟ್ಟರೇನು
ನಮ್ಮ ಕೂಡ ಬರುವುದೇ ಅಸ್ತಿ?

ಲೆಕ್ಕಚಾರದ ಬದುಕಲಿ
ಅತಿಯಾಗಿ ಕರ‍್ಚು ಮಾಡಿ
ಪ್ರೀತಿ ವಿಶ್ವಾಸಗಳನ್ನ,
ಜಿಪುಣತನವಿರಲಿ ವಿಶಸರ‍್ಪಗಳಿಗೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: