ಕವಿತೆ: ಸುಕುಮಾರಿ ಮತ್ತು ಮುದ್ದು

ವಿದ್ಯಾ ಗಾಯತ್ರಿ ಜೋಶಿ.

( ಬರಹಗಾರರ ಮಾತು: ಶಿನಾಯ ಓಕಾಯಾಮ ಅವರು ಜಪಾನಿನ ಸುಪ್ರಸಿದ್ದ ಕಲಾಕಾರರು. ಅವರು ಬಿಡಿಸಿದ ಸುಂದರವಾದ ಚಿತ್ರಕ್ಕಾಗಿ ನಾನು ಬರೆದ ಒಂದು ಮಕ್ಕಳ ಕವನ. ) 

ಮುದ್ದಾದ ಬೆಕ್ಕೊಂದು ಕಳೆದು ಹೋಗಿದೆ
ಊರೆಲ್ಲ ಹುಡುಕಿದಳು ಸುಕುಮಾರಿ

ಒಟ್ಟಿಗೆ ಆಡಿದ್ದು ತೋಟದ ಮನೆಯಲ್ಲಿ
ಹೂ ಬಳ್ಳಿ ಹಕ್ಕಿಯ ಜೊತೆಯಲ್ಲಿ

ನಾಯಿಯೂ ನಮ್ಮ ಗೆಳೆಯ
ಹುಡುಕುತ ನಡೆದನು ಎಲ್ಲೆಲ್ಲು

ಮನೆ ಮನೆಯ ಮೂಲೆಯಲಿ
ಹುಡುಕುತಲಿರುವಾಗ ಕೇಳಿತು
ಮಿಯಾವ್ ಮಿಯಾವ್ ಸಂಗೀತ

ಮೆಲ್ಲಗೆ ಕದವನ್ನು ಸುಕುಮಾರಿ ತಳ್ಳಿದಳು
ಮಿಂಚಿನ ಕಣ್ಣಿನ ಮುದ್ದನ್ನು ಕಂಡಳು

ಕುಶಿಯಾಗಿ ನಾಯಿ ನಕ್ಕಿತ್ತು
ಎಲ್ಲರ ಬಳಿ ಮುದ್ದು ಓಡಿತ್ತು

ಹೂಗಳು ಹಾರಾಡಿ
ಎಲೆ ಬಳ್ಳಿ ಕುಣಿದಾಡಿ
ಕತ್ತಲೆ ಕೋಣೆಯಿಂದ ಮುದ್ದನು ಬಿಡಿಸಿ
ಮತ್ತೆ ಕರೆದೊಯ್ದರು ಆಟಕ್ಕೆ

ಮುದ್ದಿನ ಮಿಯಾವ
ತಾಳಕ್ಕೆ ಜೊತೆಯಾಗಿ
ಆಡಿದರು ಮತ್ತೆ ಒಂದಾಗಿ

( ಚಿತ್ರಸೆಲೆ:  www.LuDa-Stock.deviantart.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks