ಕವಿತೆ: ಬನ್ನಿ ಮತದಾರರೆ

– ನಾಗರಾಜ್ ಬೆಳಗಟ್ಟ.

ಮತದಾನ, voting

ಓ ಪ್ರಬುವೇ
ಹೆಣೆಯುತ್ತಿರುವೆ
ಜಾತಿ ಜಾತಿಗೊಂದು ಚಪ್ಪರ
ಕೆಡವುತ್ತಿರುವೆ
ಮಾನವ ದರ‍್ಮದ ಗೋಪುರ
ತಡೆಯಲಾಗಿಲ್ಲ
ಹಸಿದ ಹೊಟ್ಟೆಯ
ಬಿಸಿ ಉಸಿರ

ಓ ಪ್ರಬುವೇ
ನೊಂದು ಬೆಂದವರ
ಬದುಕಿಗಿಲ್ಲ ಬದಲಾವಣೆ
ತಪ್ಪಲಿಲ್ಲ
ಬಡ ರೈತನ
ಮನದ ರೋದನೆ
ಬೆಂದು ಬತ್ತಿಹೋಗಿವೆ
ಬಡವನ
ನೂರಾರು ಬಾವನೆ

ಓ ಪ್ರಬುವೇ
ಜೋಪಡಿಯಾಗಿದೆ
ಸರ‍್ಕಾರಿ ಶಾಲೆ
ಪಕ್ಕದಲ್ಲೇ
ಅರಮನೆಯಂತಿದೆ
ಕಾಸಗಿ ಶಾಲೆ
ಪಾಳು ಬಿದ್ದಿದೆ
ಹಳ್ಳಿಯಲ್ಲಿ ದವಾಕಾನೆ

ಮತ್ತೆ
ಮರಳಿದೆ ಚುನಾವಣೆ
ಹೊತ್ತು
ತಂದಿದೆ ಗೋಶಣೆ
ಓಣಿಯಲ್ಲಿ
ಕುರಿ ಕೋಳಿಗಳ ಒಗ್ಗರಣೆ
ಕೋಣೆಯಲ್ಲಿ
ಸಾರಾಯಿ ಸೀಸೆಗಳ ಜಾಗರಣೆ

ಕೇಳುವವರ‍್ಯಾರು
ಓ ಮತದಾರ
ನೀನೆ ದೇಶದ ಸೂತ್ರದಾರ
ಮತದಾನವೇ
ಪ್ರಬುವಿಗೆ ಮೂಗುದಾರ

ಬನ್ನಿ ಮತದಾರರೆ
ಅಳಿಸೋಣ
ಒರೆಸೋಣ
ಬ್ರಶ್ಟತೆಯ
ಹೊಸಕಿ ಹಾಕೋಣ

ಬನ್ನಿ ಮತದಾರರೆ
ದನಾಶ್ರಿತ ಮತ ತೊಲಗಿಸಿ
ಗುಣಾಶ್ರಿತ ಮತವ ಚಲಾಯಿಸಿ
ನನ್ನ ಮತದ
ಮಾಲಿಕ ನೀನಲ್ಲ
ಎಂದು ಸಾರೋಣ ಬನ್ನಿ

(ಚಿತ್ರಸೆಲೆ: eci.gov.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks