ಹಿಟ್ಟಿನ ಸಿಹಿ ಕಡುಬು

– ಸವಿತಾ.

ಬೇಕಾಗುವ ಸಾಮಾನುಗಳು

ಜೋಳದ ಹಿಟ್ಟು – 1 ಲೋಟ
ಕಡಲೇ ಹಿಟ್ಟು – 1 ಲೋಟ
ಹುರಿಗಡಲೆ (ಪುಟಾಣಿ) – 1 ಲೋಟ
ತುಪ್ಪ – 1.5 (ಒಂದೂವರೆ) ಲೋಟ
ಹಾಲು – 4 ಲೋಟ
ನೀರು – 2 ಲೋಟ
ಬೆಲ್ಲ – 1.5 ( ಒಂದೂವರೆ) ಲೋಟ
ಏಲಕ್ಕಿ – 2
ಲವಂಗ – 2
ಗಸಗಸೆ – 1 ಚಮಚ

ಮಾಡುವ ಬಗೆ

ಅರ‍್ದ ಲೋಟ ತುಪ್ಪ ಸೇರಿಸಿ ಜೋಳದ ಹಿಟ್ಟು ಹುರಿದು ತೆಗೆದಿಡಿ. ಅದೇ ಬಾಣಲೆಗೆ ಮತ್ತೆ ಅರ‍್ದ ಲೋಟ ತುಪ್ಪ ಹಾಕಿ ಕಡಲೇ ಹಿಟ್ಟು ಹುರಿದು, ನಂತರ ಹುರಿಗಡಲೆ ಮಿಕ್ಸರ್ ನಲ್ಲಿ ನುಣ್ಣಗೆ ಹಿಟ್ಟು ಮಾಡಿ ಸೇರಿಸಿ. ಹುರಿದ ಹಿಟ್ಟುಗಳನ್ನು ಸ್ವಲ್ಪ ಬಿಸಿ ಮಾಡಿ ಎತ್ತಿಡಿ.

ಬೆಲ್ಲಕ್ಕೆ 2 ಲೋಟ ನೀರು ಸೇರಿಸಿ ಬಿಸಿ ಮಾಡಲು ಇಟ್ಟು, ಹಾಲು ಸೇರಿಸಿ ಸಣ್ಣ ಉರಿಯಲ್ಲಿಡಿ, ಅರ‍್ದ ಲೋಟ ತುಪ್ಪ ಹಾಕಿ. ಮೂರು ಹಿಟ್ಟುಗಳನ್ನು ಹಾಕಿ ಚೆನ್ನಾಗಿ ತಿರುಗಿಸಿ. ಬೇಗನೇ ಹಿಟ್ಟು ಹೊಂದಿಕೊಂಡು ದುಂಡಾಗಿ ಮುದ್ದೆಯಾಗಿ ಬರುತ್ತದೆ. ಒಲೆ ಆರಿಸಿ, ಏಲಕ್ಕಿ, ಲವಂಗ ಪುಡಿ ಮಾಡಿ ಹಾಕಿ. ಗಸಗಸೆ ಸೇರಿಸಿ ಚೆನ್ನಾಗಿ ತಿರುಗಿಸಿ. ದುಂಡನೆಯ ಕಡುಬು ಮಾಡಿಟ್ಟುಕೊಳ್ಳಿ. ಈಗ ಬಿಸಿ ಬಿಸಿ ಹಿಟ್ಟಿನ ಸಿಹಿ ಕಡುಬು ತಯಾರು, ತುಪ್ಪದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: