ಕವಿತೆ: ಸಾರ‍್ತಕತೆಯ ಬದುಕು

– ಮಹೇಶ ಸಿ. ಸಿ.

Life, ಬದುಕು

ಸಾರ‍್ತಕತೆಯ ಮುಂಬೆಳಗು
ಬೆಳಗುತಿದೆ ಬಾಳಿನಲಿ
ವರುಶಗಳು ದಾಟುತಲಿ
ಸಾಗುತಿದೆ ವೇಗದಲಿ

ಏಳು ಬೀಳಿಹುದಿಲ್ಲಿ
ಕಾಣದ ದಾರಿಯಲಿ
ನಡೆಯುತಿರೆ ಒಬ್ಬಂಟಿ
ಯಾರಿಗೆ ಯಾರಿಲ್ಲಿ?

ಪಡುವ ಕಶ್ಟವ ನೆನೆದು
ತೇವದಲಿ ಕಣ್ಣಂಚು
ಒರೆಸುವ ಕೈ ಇರದು
ಬಾಳಿನಲಿ ಜೊತೆಯೆಂದು

ಕಳೆಯುತಿರೆ ಪೊರೆಯು
ಬಾಳಿನ ಹೊರೆಯು
ಇಳಿದಂತೆ ಬಾಸವಿಹುದು
ಮತ್ತೇಕೆ ಚಿಂತೆ?

ಕಶ್ಟವಾದರು ಬಿಡೆವು
ಸ್ಪೂರ‍್ತಿಯೊಂದಿಗೆ ನಾವು
ಮುನ್ನುಗ್ಗಿ ನಡೆಯುತಿರೆ
ಜಯವು ಜೊತೆ ಎಂದೆಂದೂ

ಇರುಳು ಸರಿದು ಬೆಳಕು
ಹರಿವಂತೆ ಜಗದಲ್ಲಿ
ಕಶ್ಟಗಳು ಸರಿಯುತಿದೆ
ನಮ್ಮಯ ಬದುಕಲ್ಲಿ

(ಚಿತ್ರ ಸೆಲೆ: fearlessmotivation.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: