ಮನೆಯಲ್ಲೇ ಮಾಡಿ ಸವಿಯಿರಿ ಪ್ಲೇನ್ ಕೇಕ್
ಬೇಕಾಗುವ ಸಾಮಾನುಗಳು
ಮೈದಾ – 2 ಬಟ್ಟಲು
ಹಾಲು – 1/2 ಬಟ್ಟಲು
ಮೊಸರು – 1/2 ಬಟ್ಟಲು
ಅಡುಗೆ ಎಣ್ಣೆ – 1/2 ಬಟ್ಟಲು
ಸಕ್ಕರೆ – 1 ಬಟ್ಟಲು
ಬೇಕಿಂಗ್ ಸೋಡ – 1/4 ಚಮಚ
ಬೇಕಿಂಗ್ ಪೌಡರ್ – 3/4 ಚಮಚ
ವೆನಿಲ್ಲಾ ಎಸೆನ್ಸ್ – 1/4 ಚಮಚ
ಮಾಡುವ ಬಗೆ
ಮೊಸರಿಗೆ ಸಕ್ಕರೆಯನ್ನು ಹಾಕಿ, ಕರಗಲು ಬಿಡಿ. ನಂತರ ಅಡುಗೆ ಎಣ್ಣೆಯನ್ನು ಸೇರಿಸಿ ಕಲಸಿ. ಈಗ ಮೈದಾ ಸೇರಿಸಿ, ಗಂಟು ಕಟ್ಟಿಕೊಳ್ಳದಂತೆ ಚೆನ್ನಾಗಿ ಕಲಸಿ. ನಂತರ ಸ್ವಲ್ಪ ಸ್ವಲ್ಪವಾಗಿ ಹಾಲನ್ನು ಸೇರಿಸಿ, ದೋಸೆ ಸಂಪಣದಂತೆ (ದೋಸೆ ಹಿಟ್ಟು) ಮಾಡಿಕೊಳ್ಳಿ. ನಂತರ ಬೇಕಿಂಗ್ ಸೋಡ, ಬೇಕಿಂಗ್ ಪೌಡರ್, ವೆನಿಲಾ ಎಸೆನ್ಸ್ ಮತ್ತು ಒಂದು ಚಿಟಿಕೆ ಉಪ್ಪನ್ನು ಒಂದಾದ ಮೇಲೊಂದರಂತೆ ಸೇರಿಸಿ ಕಲಸಿ. ಈಗ ಕೇಕ್ ಸಂಪಣ ರೆಡಿ.
ಒಂದು ಪುಟ್ಟ ಕುಕ್ಕರ್ ತಳಕ್ಕೆ ಸ್ವಲ್ಪ ಎಣ್ಣೆ ಹಚ್ಚಿ, ಕೇಕ್ ಸಂಪಣವನ್ನು ಕುಕ್ಕರ್ ಗೆ ಹಾಕಿ. ಒಂದು ತವೆ ಇಲ್ಲವೆ ಗ್ರಿಲ್ ಆನ್ನು ಸ್ಟವ್ ಮೇಲೆ ಕಾಯಿಸಿಕೊಂಡು ಅದರ ಮೇಲೆ ಕುಕ್ಕರ್ ಇಟ್ಟು, 25 ನಿಮಿಶ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಕುಕ್ಕರ್ ಅನ್ನು ಆರಲು ಬಿಡಿ. ಈಗ ಪ್ಲೇನ್ ಕೇಕ್ ಸವಿಯಲು ರೆಡಿ.
ಇತ್ತೀಚಿನ ಅನಿಸಿಕೆಗಳು