ಎಲೆಕೋಸು (ಕ್ಯಾಬೇಜ್) ವಡೆ

– ಸವಿತಾ.

ಬೇಕಾಗುವ ಸಾಮಾನುಗಳು

ಕಡಲೇ ಹಿಟ್ಟು – 1 ಬಟ್ಟಲು
ಸಣ್ಣ ಗೋದಿ ರವೆ – 1/2 ಬಟ್ಟಲು
ಮೊಸರು – 1/2 ಬಟ್ಟಲು
ನೀರು -1/2 ಬಟ್ಟಲು
ಕತ್ತರಿಸಿದ ಎಲೆಕೋಸು – 1/2 ಬಟ್ಟಲು
ಹಸಿ ಮೆಣಸಿನಕಾಯಿ – 4
ಕಡಲೇ ಬೀಜ – 1 ಚಮಚ
ಹುರಿಗಡಲೆ(ಪುಟಾಣಿ) – 1 ಚಮಚ
ಜೀರಿಗೆ – 1/4 ಚಮಚ
ಓಂ ಕಾಳು (ಅಜೀವಾಯಿನ್) – 1/4 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿ ಬೇವು – ಸ್ವಲ್ಪ
ಅಡುಗೆ ಸೋಡಾ – ಸ್ವಲ್ಪ
ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೊಸರಿಗೆ, ನೀರು ಮತ್ತು ರವೆ ಸೇರಿಸಿ ಇಟ್ಟುಕೊಳ್ಳಿ. ಹುರಿಗಡಲೆ, ಶೇಂಗಾ (ಕಡಲೇ ಬೀಜ), ಜೀರಿಗೆ, ಅಜೀವಾಯಿನ್ (ಓಂ ಕಾಳು), ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಕರಿ ಬೇವು, ಉಪ್ಪು ಎಲ್ಲವನ್ನೂ ಮಿಕ್ಸರ್ ನಲ್ಲಿ ಪುಡಿ ಮಾಡಿ, ಮೊಸರು ರವೆ ಮಿಶ್ರಣಕ್ಕೆ ಸೇರಿಸಿ. ಕಡಲೇ ಹಿಟ್ಟಿಗೆ ಸ್ವಲ್ಪ ನೀರು ಮತ್ತು ಅಡುಗೆ ಸೋಡಾ ಸೇರಿಸಿ.

ಕತ್ತರಿಸಿದ ಎಲೆ ಕೋಸು ಹಾಕಿ ಚೆನ್ನಾಗಿ ಕಲಸಿಕೊಂಡು ಕಾದ ಎಣ್ಣೆಯಲ್ಲಿ ಬಿಟ್ಟು ವಡೆ ಕರಿದು ತೆಗೆಯಿರಿ. ಈಗ ಎಲೆಕೋಸು ವಡೆ ತಯಾರಾಯಿತು. ಚಟ್ನಿ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: