ಕವಿತೆ: ಜೀವದಾತೆ
ಜಗದ ಕಶ್ಟವೆಲ್ಲ ಮರೆಸಿದೆ
ಇವಳ ಪ್ರೀತಿಯ ಅಪ್ಪುಗೆ
ಕಂಗಳು ಸುಕ ನಿದ್ರೆಗೆ ಜಾರಿವೆ
ಒರಗಿದಾಗ ಇವಳ ಮಡಿಲಿಗೆ
ದುಕ್ಕವೆಲ್ಲಾ ಮಾಯವಾಗಿದೆ
ಇವಳ ಸ್ಪರ‍್ಶದ ಸಲುಗೆಗೆ
ನೋವು ಕರಗಿ ನಗುವು ಮೂಡಿದೆ
ಇವಳಿತ್ತ ಸ್ಪೂರ‍್ತಿಗೆ
ಕಡಲಿನಾಳಕ್ಕಿಂತ ಆಳವಾಗಿದೆ
ಇವಳ ವಾತ್ಸಲ್ಯದ ಬಾವಸಾಗರ
ಮುಗಿಲೆತ್ತರಕ್ಕೂ ಮಿಗಿಲಾಗಿದೆ
ಇವಳ ಮಮತೆಯ ಹ್ರುದಯದಾಗರ
ಜಗದೊಳು ಸಾಟಿಯಿಲ್ಲವಾಗಿದೆ
ಇವಳ ಪ್ರೇಮದ ಔದಾರ‍್ಯಕೆ
ಜಗವೇ ತಾ ತಲೆಬಾಗಿದೆ
ತಾಯಿಯೆಂಬ ಈ ಜೀವದಾತೆಗೆ
(ಚಿತ್ರ ಸೆಲೆ: pixabay)
ಇತ್ತೀಚಿನ ಅನಿಸಿಕೆಗಳು