ಕವಿತೆ: ನಮ್ಮನೆ ಲೈಬ್ರರಿ

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ನಮ್ಮ ಮನೆಯಲಿ
ಪುಟ್ಟದಾದ ಲೈಬ್ರರಿ ಇರುವುದು
ಅದರಲಿ ನನಗೆ
ಇಶ್ಟವಾದ ಪುಸ್ತಕಗಳಿರುವವು

ಬಣ್ಣ ಬಣ್ಣದ ಚಿತ್ರಗಳಿರುವ
ಕತೆಯ ಪುಸ್ತಕ ನನಗಿಶ್ಟ
ಹಾಡನು ಹಾಡುವ
ಹಾಡಿನ ಪುಸ್ತಕ ಇನ್ನೂ ಇಶ್ಟ

ಅಕ್ಕ ಓದುವ ಅಣ್ಣ ಓದುವ
ಪುಸ್ತಕಗಳಿರುವವು ಲೈಬ್ರರಿಯಲಿ
ಬಿಡುವಿನ ಸಮಯದಿ
ಓದುವೆವೆಲ್ಲಾ ನಿಶಬ್ದದಲಿ

ಅಪ್ಪ ಅಮ್ಮ ಅಜ್ಜ ಅಜ್ಜಿ
ಹೇಳಿದ ವಚನಗಳೇಳುವೆನು
ಸಾದನೆ ಮಾಡಿದ ನಾಯಕರಂತೆ
ನಾನು ಪುಸ್ತಕ ಓದು ಓದುವೆನು

ನನ್ನ ಮನೆಗೆ ನನ್ನ ಗೆಳೆಯರು
ಲೈಬ್ರರಿ ನೋಡಲು ಬರುವರು
ಕತೆಗಳ ಓದಿ ಹಾಡನು ಹಾಡಿ
ಕುಶಿಯಲ್ಲಿ ಮನೆಗೆ ಹೋಗುವರು

(ಚಿತ್ರಸೆಲೆ : professionalstudies.educ.queensu.ca)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: