ಕವಿತೆ: ಶರಣು ಜೀವದಾತೆಗೆ

ಎನ್. ರಾಜೇಶ್.

ಅಮ್ಮ, Mother

ಹೆತ್ತಾಗ ಗೊತ್ತಿರಲಿಲ್ಲ ನೀ ನನಗೆ ಯಾರೆಂದು
ಅಪ್ಪಿದ ಮೊದಲ ಕ್ಶಣದಿ ಅರಿತೆ ನೀ ದೇವರೆಂದು

ಜಗತ್ತಿಗೆ ಅರಿವಿದೆ ತಾಯಿಯೇ ಮೊದಲ ಗುರುವೆಂದು
ನೀ ಕಳಿಸಿದ ಪಾಟಗಳೇ ಜೀವನದ ದಾರಿ ದೀಪವಿಂದು

ಹೇಳು ತಾಯಿ ನಿಮ್ಮ ಪ್ರೀತಿಯ ಅಳೆಯೋ ಸಾದನ ಯಾವುದೆಂದು
ಸಾಗರದಶ್ಟು ಪ್ರೀತಿಯಕೊಟ್ಟು ನಿಂತಿರುವೆ ಮಮತೆಯ ದೇವತೆಯಾಗಿಂದು

ಕಲಿಸಿರುವೆ ಕಶ್ಟಗಳ ಎದುರಿಸುವ ಬಗೆ ಹೇಗೆಂದು
ಜೊತೆಗಿರುವೆ ಜೀವನದ ಪ್ರತಿ ಹಾದಿಯಲ್ಲು ನೀ ಸ್ಪೂರ‍್ತಿಯಾಗಿಂದು

ನೋವು ನೂರಿದ್ದರೂ ನಗುತ್ತಿರುವೆ ಏನೂ ಆಗಿಲ್ಲವೆಂದು
ನನಗೆ ತಿಳಿದಿಲ್ಲ ಏನೂ ಹೇಳಬೇಕೆಂದು

ಗೊತ್ತಿಲ್ಲ ನನಗೆ ಸಮಸ್ತ ಲೋಕದಲ್ಲಿ ಎಶ್ಟು ದೇವರಿರಬಹುದೆಂದು
ಮನಕ್ಕೆ ಅರಿವಿದೆ ನನ್ನ ದೇವತೆ ನನ್ನಮ್ಮ ಜೊತೆಗಿರುವಳೆಂದು

ನಿಮ್ಮ ವರ‍್ಣಿಸಲು ಪದವು ಸಾಲದು ನನ್ನಲ್ಲಿ ಇಂದು
ಅಮ್ಮ, ಸ್ತ್ರೀ ಕುಲಕ್ಕೆ ತಲೆ ಬಾಗಿ ನಮಸ್ಕರಿಸಿದೆ ನನ್ನ ಜೊತೆ ನನ್ನ ಹ್ರುದಯವಿಂದು

ಅರಿವಿಲ್ಲದೆ ಅಂದಿರುವೆ ಎದುರು ಮಾತುಗಳನ್ನ ನಿನ್ನೆದುರಿಗೆ ನಿಂದು
ದಯಮಾಡಿ ಕ್ಶಮಿಸಿ ಬಿಡಿ ನಿಮ್ಮ ಪಾದಕ್ಕೆ ಶರಣಾಗುವೆ ಇಂದು

ಅಂದುಕೊಂಡೆ ನೀ ಕೊಟ್ಟ ಜನ್ಮಕ್ಕೆ ಕ್ರುತಜ್ನತೆ ಹೇಳಬೇಕೆಂದು
ದಡ್ಡ ನಾನು, ತಿಳಿದಾಗ ತಾಯಿಯ ರುಣ ತೀರಿಸಲಾಗದೆಂದು

ಜಗತ್ತಿಗೆ ಕೂಗಿ ಹೇಳುವೆ ಅದ್ರುಶ್ಟವಂತ ನಾನೆಂದು
ಕಾರಣ, ನಿಮ್ಮಂತ ತಾಯಿಯ ಮಕ್ಕಳಾಗಿದ್ದಕ್ಕೆ ಜೀವನ ಸಾರ‍್ತಕವಿಂದು

ನಿಮಗಿದೋ ನನ್ನ ಶರಣು
ಜೀವದಾತೆಗೆ, ಜಗನ್ಮಾತೆಗೆ

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: