ಕವಿತೆ: ಚಲ

– ಮಹೇಶ ಸಿ. ಸಿ.ಹೊರಾಟ, ಬದುಕು, life, challenges

ಬೆಳೆಯಲೇ ಬೇಕೆಂಬ ಚಲ
ಇರಬೇಕು ಮನದಲ್ಲಿ
ಸಿಕ್ಕರೂ ಸಾಕು ಸ್ವಲ್ಪವೇ
ಅವಕಾಶ ಕೊನೆಯಲ್ಲಿ

ಸಾಕಿ ಸಲಹಲು
ಯಾರಿಲ್ಲ ಜೊತೆಯಲ್ಲಿ
ನಮಗೆ ನಾವೇ ಬೆಳೆಯೋಣ
ಜೀವನದ ಪಯಣದಲಿ

ಕಶ್ಟ ಸುಕಗಳೆಲ್ಲಾ
ಒಮ್ಮೆಲೆ ಬರುವುದಿಲ್ಲ
ನನ್ನ ಇಂದಿನ ದಿನವು
ಸಂಕೋಲೆಯ ಬಂದಿಯಲ್ಲ

ಗುರಿಯೊಂದೆ ಜೊತೆಗಿರಲು
ಸೋಲು ಸುಳಿಯುವುದಿಲ್ಲ
ಮನವೆಂದು ಕದಡದಿರಲು
ಸೋಲೆಂಬ ಸುಳಿವಿಲ್ಲ

ಕಶ್ಟದ ಸಮಯದಲಿ
ಮನನೊಂದ ತಿರಸ್ಕಾರ
ಬೆಳೆದ ನಂತರ ನಮಗೆ
ಸಿಗುವುದು ಪುರಸ್ಕಾರ

ನೋವು ಸಹಿಸಿ ಬೆಳೆದ
ಮನಸಿನ ಸಾಕಾರ
ಅತ್ಯಮೂಲ್ಯ ಪಾಟವಿದು
ಜೀವನವೇ ಸಾಕ್ಶಾತ್ಕಾರ

(ಚಿತ್ರ ಸೆಲೆ: 8-principles-of-life )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: