ಕವಿತೆ: ಮುಂಜಾನೆಯ ಹೊಂಬಿಸಿಲು

– ವಿನು ರವಿ.customized-3d-photo-wallpaper-for-walls-3-d-wall-murals-natural-landscape-font-b-forest-b

ಮುಂಜಾನೆಯ ಹೊಂಬಿಸಿಲಲಿ
ಅರಳಿತೊಂದು ಗುಲಾಬಿ
ಅದೇನು ಗಾಡಬಣ್ಣ
ಅದೆಶ್ಟು ಮೋಹಕ ವರ‍್ಣ

ಪಕಳೆಗಳೊ ಮ್ರುದು ಮದುರ ಕೋಮಲ
ಬಳ್ಳಿಯಲ್ಲಿ ತೂಗುವ ನಿನ್ನ ಚೆಂದಕೆ
ತಂಗಾಳಿಗೂ ಸೋಕಲು ಅಂಜಿಕೆ

ಬಿಸಿಲೇರಿತು
ಹಗಲು ಪ್ರಕರವಾಗಿ ಉರಿಯಿತು
ಬಾಡಲಿಲ್ಲ ನೀನು
ಇನ್ನಶ್ಟು ಸುಂದರವಾಗಿ ನಗುವ ಬೀರಿದೆ
ಕಣ್ಮನ ಸೆಳೆದೆ

ಮುಸ್ಸಂಜೆಯ ಇಳಿಹೊತ್ತು
ಬಿಸಿಲು ಪಡುವಣದಿ
ವಿರಮಿಸಲು ತೆರಳಿತು
ಅಯ್ಯೋ ನಿನ್ನ ಬಣ್ಣ ಮಾಸಿತು

ಪಕಳೆಗಳು ನಲುಗಿದವು
ಗಿಡದ ತೊಟ್ಟ ಕಳಚಿದವು
ಮಣ್ಣ ಮಡಿಲ ಸೇರಿದವು
ಇರವು ಇಲ್ಲದರಿವು ನಡುವೆ

ಹೊಳೆವುದೇನೊ ಕಾಣೆ
ಹುಡುಕಿದಶ್ಟು ಹೂವಿನಂತೆ
ಅರಳಿ ಬಾಡುವ ಕತೆಯೆ
ಕಂಡ ಚೆಲುವು ರಮ್ಯತೆ ಅಳಿದರೇನು
ಒಳಗಿಳಿದ ಪ್ರೀತಿ ಬವ್ಯತೆಗೆ ಕೊನೆಯುಂಟೇನು.

(ಚಿತ್ರ ಸೆಲೆ: aliexpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: