ಕವಿತೆ: ನಿನ್ನಂತೆ ನಾನಾಗಲಾರೆ

– ವೆಂಕಟೇಶ ಚಾಗಿ.

ನಿನ್ನಂತೆ ನಾನಾಗಬೇಕೇ?
ಕಂಡಿತ ಇಲ್ಲ
ನಿನ್ನ ಸುಳ್ಳು ನನಗೆ ಬೇಕಿಲ್ಲ
ಸುಳ್ಳಿನ ಅರಮನೆ ನನಗಲ್ಲ
ಕನಸುಗಳ ಹಾರ ಬೇಡವೇ ಬೇಡ
ಹುಸಿನಗೆಯ ನೋವು ಬೇಡ
ನಿನ್ನಂತೆ ನಾನಾಗಲಾರೆ

ನಿನ್ನಂತೆ ವ್ಯಾಪಾರಿಯಾಗಬೇಕೆ?
ಕಂಡಿತ ಇಲ್ಲ
ಕೊಡುಕೊಳ್ಳುವ ಬುದ್ದಿ ನನಗಿಲ್ಲ
ಉಡಾಪೆ ಉತ್ತರಗಳ ಗೊಡವೆ ಇಲ್ಲ
ಕಾಣದ ಲೋಕದ ಪಯಣಿಕನಲ್ಲ
ನಾನು ಮತಕ್ಕೆ ಹಕ್ಕುದಾರ
ಎಲ್ಲಾ ಅದಿಕಾರದ ಸೂತ್ರದಾರ
ನಿನ್ನಂತೆ ನಾನಾಗಲಾರೆ

ನಿನ್ನಂತೆ ಮತೀಯವಾದಿ ಆಗಬೇಕೆ?
ಕಂಡಿತ ಇಲ್ಲ
ಜಾತಿದರ‍್ಮದ ಹಸಿವು ನನಗಿಲ್ಲ
ಮತ ದರ‍್ಮಗಳ ವ್ಯಾಮೋಹವಿಲ್ಲ
ಬಟ್ಟೆ ಬಾಶೆಯ ಗುಂಪಿನವನಲ್ಲ
ಕಲ್ಲೆಸೆದು ಹರಸುವವನಲ್ಲ
ನಿನ್ನಂತೆ ನಾನಾಗಲಾರೆ

ನಿನ್ನಂತೆ ಲೋಬಿಯಾಗಬೇಕೇ?
ಕಂಡಿತ ಇಲ್ಲ
ಚೂರು ಹಣದ ಅರಸನಲ್ಲ
ಸುರಲೋಕದ ಅಸುರ ನಾನಲ್ಲ
ಸತ್ಯ ಲೋಕದ ಕನಸುಗಾರ ನಾನು
ಮಹಾತ್ಮರ ಮಗುವು ನಾನು
ನಿನ್ನಂತೆ ನಾನಾಗಲಾರೆ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *