ಕವಿತೆ: ಮುಸ್ಸಂಜೆ ಏನೆಂದು ಹಾಡಲಿ

ಶಶಿಕುಮಾರ್ ಡಿ ಜೆ.

ಮುಸ್ಸಂಜೆ ಏನೆಂದು ಹಾಡಲಿ
ಮುಂಜಾನೆ ಕಣ್ಣುಜ್ಜಿ
ಬಿಸಿಲಲ್ಲಿ ಬೆವರರಿಸಿ
ಮುಸ್ಸಂಜೆ ಹಾಯಾಗಿ ಕುಳಿತಿರುವೆ

ಇರುಳಿನ ಹೆಬ್ಬಾಗಿಲು ನೀನೇ
ಹಗಲಿನ ಕೊನೆಗಲ್ಲು ನೀನೇ

ಮುಸ್ಸಂಜೆ ನೀನೆಶ್ಟು ಸೌಮ್ಯ
ಮುಂಜಾನೆಯಂತೆ ನೀ ಮೈ ಕೊರೆಯುವುದಿಲ್ಲ
ಮದ್ಯಾಹ್ನದಂತೆ ನೀ ಸುಡುವುದಿಲ್ಲ
ಇರುಳಿನಂತೆ ನೀ ಎದೆ ನಡುಗಿಸುವುದಿಲ್ಲ

ಬಿಸಿಲಿಗೆ ಮೇಲೇರಿದ
ದೂಳೆಲ್ಲ ಕೆಳಗಿಳಿಯಿತು
ಹಗಲಲ್ಲಿ ಹಾರಿದ ಹಕ್ಕಿಗಳೆಲ್ಲಾ
ಗೂಡು ಸೇರಿತು

ಸುಡುತ್ತಿದ್ದ ಸೂರಿಯ
ರಂಗೇರಿ ತಂಪಾದ

ಬೆಳಕಿಗೆ ಮಂಕು
ಬಡಿಸಿದೆ
ಇರುಳಿಗೆ ತಂಪು
ಹರಿಸಿದೆ

ಮುಸ್ಸಂಜೆ ನೀ ಸೌಮ್ಯ
ಮುಸ್ಸಂಜೆ ನೀ ಅನನ್ಯ
ಮುಸ್ಸಂಜೆ ನೀ ಅನಂತ

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: