ಕವಿತೆ: ಮೂಡಣದ ಹೊಂಗಿರಣ
– ಮಹೇಶ ಸಿ. ಸಿ.
ಮೂಡಣದಿ ಅರ‍್ಕನು
ಹೊಳೆಯುತಲಿ ತಾ ಬರಲು
ಹೊಸ ಬಗೆಯ ಹೊಂಗಿರಣ
ಬಾಳಲ್ಲಿ ತರುತಿರಲು
ಕತ್ತಲೆಯು ಹೆದರಿ ಸರಿ ದಾರಿ ಬಿಡಲು
ಬೆಳಕಿನ ಸಿಂಚನದಿ ಬೂತಾಯ ಒಡಲು
ಇಬ್ಬನಿ ಹನಿಗಳ ಮುತ್ತಿನ ಸಾಲೆ
ನೋಡುವ ಕಂಗಳಿಗೆ ಆ ದ್ರುಶ್ಯ ಮಾಲೆ
ಚಿಲಿಪಿಲಿಗುಟ್ಟುತಿವೆ ಹಕ್ಕಿಗಳ ನಾದ
ಕೇಳುತಿರೆ ಕಿವಿಗಳಿಗೆ ಏನೋ ವಿನೋದ
ಅಂಬಾ ಎನುತ ತಾಯ ಬಳಿ ಆಕಳು
ನೋಡುವುದೆ ಚೆಂದ ಅದನೆಂದು ಈಗಲೂ
ಮನೆಗಳ ಅಂಗಳದಿ ರಂಗೋಲಿ ಬಿಡಿಸ್ಯರ
ನೋಡಲು ಚೆಂದ ಬಣ್ಣಗಳ ಚಿತ್ತಾರ
ಅರಳುತಲಿ ಸೂಸಿವೆ ಹೂಗಳು ಗಮಲು
ಅಂದವು ಹೆಚ್ಚಿದೆ ಹೆಂಗಳೆ ಮುಡಿಯಲು
( ಚಿತ್ರ ಸೆಲೆ: drmaxlingo.com )
ಇತ್ತೀಚಿನ ಅನಿಸಿಕೆಗಳು