ಕಿರುಗವಿತೆಗಳು

– ನಿತಿನ್ ಗೌಡ.

ಅವರವರ ನೋಟಕ್ಕೆ

ಪಯಣಿಗನಿಗೆ ಕಂಡದ್ದು;
ಆ ಕಾನು‌ ಎಶ್ಟು ಸೊಗಸೆಂದು,
ಅದರಂದ ಎಶ್ಟು‌‌ ಹಿರಿದು,
ಅ ಮಲೆಗುಡ್ಡಗಳೆಶ್ಟು ಸೊಗಸು!

ಆ ಕಾನು ಮಂದಿಗೆ‌‌ ಕಂಡದ್ದು,
ದುರ್‍ಗಮ ಕಾನಿನೊಡಲು..
ಅವರೊಡಲ‌ ತುಂಬಿಸಿಕೊಳ್ಳೋ ಪಾಡು,
ಅವರವರ ಕಾಲಮೇಲೆ‌ ನಿಂತು‌ ನೋಡಲು,
ಸೊಗಸಂತೆ, ಚೆಲುವಂತೆ‌, ದುರ್‍ಗಮವಂತೆ ಅದೇ ಕಾಡು!

 

ತನ್ನಂಬಿಕೆ

ಉತ್ತಿಲ್ಲ, ಬಿತ್ತಿಲ್ಲ ಆದರೂ ಅರಳಿವೆ
ಕಣ್ಣಲ್ಲಿ ನೂರಾರು ಕನಸುಗಳು..
ಸಾದಿಸೋ ಬಗೆ ತಿಳಿದಿಲ್ಲ,
ಆದರೂ ಸಾದಿಸುವ ಚಲ ಬಿಡುವುದಿಲ್ಲ
ಆ ಬಳಲಿದೆಳೆಯ ಜೀವಗಳು..

ನಿಟ್ಟುಸಿರು

ಕರಗದ ನೋವನು, ಬಚ್ಚಿಟ್ಟರೇನು
ತೆರೆದಿಡಲು ಮನದಳಲು, ನಿನ್ನವರೊಡನೆ;
ಕರಗುವುದು ಮನದ ಬಾರ, ಹಿಮದಂತೆ..
ಹರಿವುದು ಕೊನೆಗದು, ನಿಟ್ಟುಸಿರ ಕಡಲಂತೆ

ನೆಮ್ಮದಿ

ನೆಮ್ಮದಿಯ ಅರಸಿ
ಎಶ್ಟು ಸುತ್ತಿದರೇನು,ಕಾಣದ್ದನ್ನು ಬೆನ್ನಟ್ಟಿ..
ಇರುವಲ್ಲಿ ಹೊಂದಲಾಗದ್ದು,
ಅದು ಎಲ್ಲಿಯೂ‌ ಸಿಗಲಾರದು!

 

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *